ನಮ್ಮ ತಂಡ

"AMAVASYE" - ಇಂತಹ ಅರ್ಧ ರಾತ್ರಿಯ "ಹುಚ್ಚು ಹೆಸರು" ಹೇಗೆ ಬಂತೆಂದು ತಿಳಿಸುವ ಮೊದಲು.... ನಮ್ಮ ತಂಡದ ಪರಿಚಯ...

Anand (ಅ)

ಹೆಸರಿಗೆ ತಕ್ಕನಾದ petname "Happy", ಬೆಳಿಗ್ಗೆ 09.10 ನಿಮಿಷಕ್ಕೆ ಖಾಲಿ ಬ್ಯಾಗನ್ನು ಹೆಗಲಿಗೆ ಹೇರಿ , ಧಡ.. ಧಡ... ಧಡ... ಅಂತ, ಮರದ ಮೆಟ್ಟಿಲುಗಳನ್ನು ಮೆಟ್ಟುತ್ತಾ ಮೇಲೆ ಬಂದು "Good Morning ri Sandeep" ಎಂದು, ಕರಿದಾದ ಕುರ್ಚಿಯನ್ನು ಎಷ್ಟು ಸಾಧ್ಯವೋ ಅಷ್ಟು ಕೆಳಗೆ ಮಾಡಿ, ಏರಿ ಕೂತು, ಕಾಲು ಚಾಚಿ  " ವಸುಧೇಶ್ ನೆನ್ನೆ ಹೆಳುದ್ರು, ಹಾಗೆಆತ್ರಿ..., ಪ್ರೆಸೆಂಟೇಶನ್ ಮಾಡ್ಬೇಕಂತೆ, ಮಧ್ಯಾನದ್ ಹೊತ್ತಿಗೆ ಕಳ್ಸ್ಬೇಕಂತ್ರಿ..... " ಎಂದು, ಒಂದು ಸಾರಿ ಆಸ್ತಮ ಬಂದು ಗಂಟಲು ಕಟ್ಟಿದ ಅಜ್ಜಿಯ ಅರ್ಧ ರಾತ್ರಿಯ ಕೆಮ್ಮಿನಂತೆ  "ಖ್ಹ್ ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್" ಎಂದು ನಕ್ಕು ಕೂತರೆ ಇನ್ನು ಅಂದಿನ ಕೆಲಸ ಶುರು.

Anand ಸದಾ ಹಸನ್ಮುಖ, 12 ಇಂಚಿನ ಮುದ್ದಾದ ಗುಂಡನೆ ಮುಖದಲ್ಲಿ 3 ಇಂಚಿನ ಬಾಯಿ, ಅದು ಅಗಲ ಸರಿದರೆ ಅದರಿಂದ ಹೊರ ಹಾರಿ ಬರುವ "ಖ್ಹ್ ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್" ನಗು.. Anand typical trademarks.. ಮನೆ ಬೀಳ್ತಾಯಿದೆ ಎಂದರೆ..., "ಬೀಳ್ಲಿ ಬಿಡ್ರಿ ಆಮೆಲೆ ನೋಡ್ಕೊಳೋನ" ಎನ್ನುವಷ್ಟು chilled out person, ಕೆಲಸಕ್ಕೆ ಕೂತರೆ ಪಕ್ಕದವನ ತಲೆ ಹೊಡೆದರೂ ಗೊತ್ತಗದಷ್ಟು ತಲ್ಲೀನ.., "ಹೊಟ್ಟೆ ಗುಡಾಣ, ಮನಸು ಮೈದಾನ...", ಯಾವುದೇ ವಿಷಯವನ್ನು ತಕ್ಷಣ ಅರ್ಥ ಮಾಡಿಕೊಳ್ಳುವ ಕೌಶಲ್ಯ, and his quick responses...baapre... amazing!!!! ಸದ್ಯಕ್ಕೆ ತೂಕ ಇಳಿಸುವಲ್ಲಿ ತಲ್ಲೀನ.

ಇವ ನಮ್ಮ "ಹ್ಯಾಪಿ"...


Mahantesh (ಮ)

"ಮಹಂತು/ಮಹಿ" ಯಾವುದಾದರೂ ಸರಿ ಹತ್ತು ಬಾರಿ ಕರೆದರೆ ಒಂದು ಸಾರಿ ಬಂದೇ ಬಿಡುತ್ತದೆ ಪ್ರತಿಕ್ರಿಯೆ..."ಹೇಳ್ರಿ ಸರ್ರೆ"..

33 ಹಲ್ಲಿನ ಮಾನವ. ಪೂರ್ವ ಜನ್ಮದ "ಮೊಲ"
ಮಹಂತನ ಮಾತು ಮುತ್ತಿನ ಹಾಗೆ, "ಅವನವ್ನು" ಇಂದ ಶುರುವಾಗಿ "ಹೊಲಸು ಸೂಳೆ ಮಗ" ನಿಂದ ಮುಗಿಯದಿದ್ದರೆ ಅದು ಅವನಾಡಿದ ಮಾತೇ ಅಲ್ಲ!!!
ನೋಡಲು ನೇಪಾಳದಿಂದ ಓಡಿ ಬಂದ ಹಾಗೆ ಕಂಡರೂ ಶುಧ್ಧ ಕನ್ನಡಿಗ, ಬೆಳಗಾವಿಯ ವೀರ ಪುತ್ರ, ನಮ್ಮ office ನ ಮುದ್ದಿನ ಕೂಸು....ನಮ್ಮೆಲ್ಲರ ಪ್ರೀತಿಯ ತಮ್ಮ .


ಪಾದರಸದಂತೆ ಚುರುಕು, ಯಾವುದಕ್ಕೂ Ready, ಎಲ್ಲಿಗಾದರೂ ನಡಿ.... ತನ್ನ 'ಕೆಂಪ'ನೆಯ bike ಏರಿ ಕೂತರೆ ಮುಗಿಯಿತು.ಇವ ಬಂದರೆ company ಗೆ ಬೆಳಗಾದಂತೆ. ಮಾತಿಗಿಳಿದರೆ, ಅಮೇರಿಕಾದ ಕಾರ್ಬನ್ ಪ್ರಿಂಟೇ "Oh.....S**t" "yaa Mr." "Sorry...I Didn't get your name"...ಇವು ಅವನ ಬಾಯಿಂದ ಕೇಳಿದರೇನೇ ಸೊಗಸು.
ಯಾವುದನ್ನಾಗಲೀ ಮಾಡಿಯೇ ತೀರುವ ಛಲ... ಸದ್ಯಕ್ಕೆ Guitar ಕೊಂಡು ಆಗಿದೆ, ಅದಕ್ಕೆ tutor ಹುಡುಕುವ ಬರಾಟೆಯಲ್ಲಿದ್ದಾರೆ... .ಎಲ್ಲರನ್ನೂ ತನ್ನವರನ್ನಾಗಿಸಿಕೊಂಡು ಬಿಡುವ ಸರಳ ಸ್ವಭಾವ, ಹಚ್ಚಿಕೊಂಡರೆ ಕಿತ್ತರೂ ಬಾರದಷ್ಟು ಹತ್ತಿರವಾಗುವ ಸ್ನೇಹಜೀವಿ, ಸೂಕ್ಶ್ಮಜೀವಿ, totally ನಮ್ಮ office ನ ’ಚಿರಂಜೀವಿ’

ಇವ ನಮ್ಮ "ಮಹಂತು"...


Vasudhesh (ವಾ)

"ವಸು"ಪೂರ್ವ ಜನ್ಮದ "Military Officer" . ಅವರದು systematic ಜೀವನಶೈಲಿ . ನಮ್ಮ ತಂಡದ ಸ್ವಯಂ ಘೋಶಿತ "ನಕುಲ" (ವಿವರ.., ಮುಂದೊಂದು ದಿನ). ಖಾಲಿ ಕಾಗದವನ್ನು ಬಿಳಿಯ paint ನಲ್ಲಿ ಅದ್ದಿ ತಗೆದಷ್ಟು "ಸಾದಾ" ಮನುಷ್ಯ!!!..

ನಮ್ಮ ಟೀಮಿನ ನವಮನ್ಮಥ.. ನಮ್ಮ "ಹ್ಯಾಪಿ"ಯನ್ನು bus ಹತ್ತಿಸಿ ಕರೆದುಕೊಂಡು ಬಂದು-ಹೋಗುವ local gaurdian ಕೂಡ!!! ತನ್ನ "ಕಾಸು ಬೀಳುವ’ Message Tone ಇರುವ ಮೊಬೈಲ್ ಸದ್ದು ಮಾಡಿದರೆ, "ನಾನೊಂದು ಜೋಕ್ ಹೇಳ್ಲಿ???" ಎಂದು ಅದನ್ನು ನಮಗೆ ವಿವರಿಸಿ, ನಮ್ಮ "ಸಾಬಣ್ಣ"ನಿಗೆ ಇಂಗ್ಲೀಷ್ ನಲ್ಲಿ ಅನುವಾದಿಸಿ ಹೇಳಿದರೇನೇ ಆ Message ಗೆ ಮುಕ್ತಿ. ಯಾವುದೇ ಕೆಲಸವನ್ನು" mmmhhhh" ಎಂದು ಮಾಡಿ ಮುಗಿಸಿ ತನ್ನ Diary ಯಲ್ಲಿ "ಮುಗಿದ ಲೆಕ್ಕ"ವನ್ನು ಗೀಚಿದಂತೆ ಗೀಚಿದರೆ, ನೆಮ್ಮದಿ ಕಂಡಂತೆ... Office ನಲ್ಲಿ Development ತಗ್ನ, ಮನೆಯಲ್ಲಿ ಪುಸ್ತಕದಲ್ಲಿ ಮಗ್ನ, ಏನನ್ನಾದರೂ ಅರ್ಥ ಮಾಡಿಸಲು ಕೂತರೆ, ಕೇಳುವವರ ತಲೆ.....ಚಿತ್ರಾನ್ನ!!! ಶಾಂತ, ಸಭ್ಹ್ಯ, ಹುಡುಗಿಯರಿಗೆ ಲಭ್ಯ....


ಇವ ನಮ್ಮ "ವಸು" ...


Sandeep-sandy (ಸ್ಯೆ)

ಈ  ನಮ್ಮ  "ಹೀರೋ
" ಎಂಟ್ರಿ ಲೇಟ್ ಆಯ್ತು ಅನ್ಸುತ್ತೆ. ಸ್ವಲ್ಪ ಥ್ರಿಲ್ ಇರಲಿ ಅಂತ................................

"ಪ್ರಾಣಿ ಮತ್ತು ವನಸ್ಪತಿ ಶಾಸ್ತ್ರದ ಆಭಿಯಂತರ"..........ನಮ್ಮ ಸಂದೀಪ್ (Lighting the way) ಗೆ ನಾವೆಲ್ಲ ಕರೆಯೋದು "ಮಿಸ್ಟರ್ ಪರ್ಫೆಕ್ಟ್" ಅಂತ (ನಮ್ಮ ಮಾಂತ್ಯಾ ("ಮಾ") ಇಟ್ಟಿದ್ದು).
ಸದಾ ಹಸನ್ಮುಖಿ, ಸ್ನೇಹಮಯಿ ಹಾಗೇ ಚಾಕಲೇಟ್ ಪ್ರಿಯ ........................

ಏನೇ ಪ್ರಾಬ್ಲಮ್ ಗೂ ಧಿಡೀರ್ ಸಲ್ಯೂಶನ್ ವಯ್ಯನತ್ರ. ಏನಾದ್ರು ಕೇಳಿದ್ರೆ ಚಕ್  ಅಂತ ಉತ್ರ ರೆಡಿ. ಅವ್ರ ತಲೇಲಿ ಉತ್ರ ಸಿಗದಿದ್ರೆ ನಮ್ಮ ಚಾಟ್ ಬಾಕ್ಸಲ್ಲಿ ತಕ್ಷಣ ಲಿಂಕ್ ಬಿದ್ದಿರುತ್ತೆ.  ನಮ್ಮ ಆಫೀಸ್ನಲ್ಲಿ ಹೊಸ ವಾತಾವರಣ ಮೂಡಿಸಿದ ಕೀರ್ತಿ ಇವನಿಗೆ.

ರೀ ಹ್ಯಾಪಿ ಚಾಕಲೇಟ್ ಎಲ್ರಿ? ಎಂದು ಕೇಳುತ್ತಾ, "ನಿನ್ನೆ ಯಾಕೆ ಪೋನ್ ಮಾಡಿಲ್ಲ" ಎಂದು ಮುನಿಸಿಕೊಂಡ "ಮಾಂತು" ಗೆ ಸಮಾಧಾನ ಮಾಡುತ್ತಾ, ವಸು "ಆವರಣ" ಪುಸ್ತಕ ಕೇಳಿದಾಗ ಅದು ಅಲ್ಲ "ಅನಾವರಣ" ತಂದುಕೊಡ್ತೀನಿ ಅಂತ ಹೇಳಿ, ಸಾಬಣ್ಣ ಮತ್ತು ಅವನ ಸಹ ಪಾಟಿಗಳಿಗೆ ಶತನಾಮಾವಳಿ ಹೇಳಿ, is there any work sir?....(..........) no problem sir. I will do it from home sir............ಎಂದು ಹೇಳಿ ಹೊರಟರೆ ಮುಗಿತು...."ಖೇಲ್ ಖತಮ್  ನಾಟಕ್ ಬಂದ್ ". ಬೆಂಗಳೂರಿನಿಂದ ಶಿಡ್ಲ ಘಟ್ಟದ ಪ್ರಯಾಣದಲ್ಲಿ "ಏನ್ಮಾಡ್ತೀದಿರಿ?" ಎಂದು ಎಲ್ಲರಿಗೂ ಫೋನ್ ಮಾಡಿದ್ರೇನೆ ಇವರಿಗೆ ಸಮಾಧಾನ. ಅದೇನೋ ಎಲ್ಲರನ್ನೂ ಹಚ್ಚಿಕೊಳ್ಳುವ ಮುಗ್ದ.

ಇವ ನಮ್ಮ "ಸ್ಯಾಂಡಿ"