Saturday, July 17, 2010

ಆನಂದ್....ಆ....ಮಹಂತೇಶ್.... ಮ

"ಏನ್ಲೇ.... ಏನೋ ಭಾರಿ ಬರೆದಿದ್ದೀಯ.... ತುಂಬಾ ದಿನ ಆದ ಮೇಲೆ ನೀನು ಬರೆದದ್ದು ಓದಿದೆ, ಬ್ಲಾಗ್ ಗೀಗ್ ಬರಿ... ಚೆನ್ನಗ್ ಬರಿತೀಯ......" ನನ್ನ team ಮಿತ್ರರಿಗೆ ಬರೆದಿದ್ದ testimonial ನೋಡಿ ಸಂಜು message ಮಾಡಿದ್ದ.... ಅದೇ ಗುಂಗಿನಲ್ಲಿ javascriptನಲ್ಲಿ ಮಾಡಬೇಕಿದ್ದ changes ಮಾಡುತ್ತಾ ಕುಳಿತಿದ್ದೆ. ಎಂದಿನಂತೆ ಒಬ್ಬರೊನ್ನೊಬ್ಬರು ಕಿಚಾಯಿಸುತ್ತಿದ್ದ team ಅಂದು hyperactive ಆಗಿ ಕೆಲಸ ಮಾಡುತ್ತಾ ಕುಳಿತಿತ್ತು.

ಹೇಗೋ... ಹೀಗೇ ನನ್ನ ಜೊತೆ social networkingನ ಬಗ್ಗೆ ಮಾತು ಆಡುತ್ತಿದ್ದ "ವಸು", Eureka ಎಂದು bathtubನಿಂದ ಎದ್ದು ಕೂತ Archimedesನಂತೆ, ತನ್ನ low height chair ನಿಂದ ಛಂಗ್...ನೆ ಹಾರಿ ನಿಂತು, "ನಾವೇಕೆ ನಮ್ಮ ಬ್ಲಾಗ್ ಮಾಡಬಾರ್ದು????" ಎಂದದ್ದೇ ತಡ... ಕುಡಿಯಲು ಬಿಟ್ಟವನಿಗೆ ಬಾಟ್ಲಿ ತೋರಿಸಿದಂತಾಗಿ ನಾನು, "ಹೇ........ ಮಸ್ತ್ idea,ನಮ್ಮ ಟೀಮಿನ ಬ್ಲಾಗ್ ಮಾಡೋಣ್ವಾ??????" ಎಂದೆ....ಡೋಲಿಗೊಂದು ತಾಳವಿದ್ದಂತೆ, ಮಹಂತು... ತನ್ನ ಬೆಳಗಾವಿ ಶೈಲಿಯಲ್ಲಿ.."ಮಾಡೋಣುಉಉಉ" ಎಂದದ್ದೇ .... ಅದ್ಲೆಲ್ಲಿ ಅಡಗಿತ್ತೋ ಆ ಸ್ಫೂರ್ತಿ......, ಎಲ್ಲಾರೊ ಜೈ ಎನ್ನುವುದನ್ನೇ ಕಾಯುತ್ತಿದ್ದಂತೆ ಕಂಡ "ವಸು", ತಮ್ಮ computerನಲ್ಲಿ blogspot ತೆರೆದು ನಮ್ಮ account ಮಾಡಲು ಮುಂದಾಗಿಯೇಬಿಟ್ಟರು..... ಏನೋ ಅವರನ್ನು ತಡೆದು ನಿಲ್ಲಿಸಿದವರಂತಾಗಿ......"ಅದು ಸರಿ.., ಹೆಸರೇನು ಇಡೋಣ????"... ಎಲ್ಲರ ಕಡೆಯೂ ಒಂದು ಬಾರಿ ನೋಡಿ, ಎಲ್ಲರ ಮುಖಾರವಿಂದಗಳಲ್ಲಿ Question mark ಕಂಡು, ಅವರೇ ಎಂದೋ decide ಮಾಡಿ ಇಟ್ಟಿದ್ದ ಹೆಸರನ್ನು ನೆನಪಿಸಿಕೊಂಡು..."ಗೆಳೆಯರ ಬಳಗ......ಗೆಳೆಯರ ಬಳಗ" ಎರಡು ಸಾರಿ ಕೂಗಿ ಹೇಳಿದರು.... ಮಹಂತು, ತನ್ನ ಚಿಕ್ಕ ಕಣ್ಣುಗಳನ್ನು ಇನ್ನಷ್ಟು ಚಿಕ್ಕವು ಮಾಡಿ, ಹರಳೆ ಎಣ್ಣೆ ಕುಡಿದವನಂತೆ ಒಂದು look ಕೊಟ್ಟ... ಎಲ್ಲೋ ಅಸಮಂಜಸದಲ್ಲಿದ್ದ ನನಗೂ ಒಂದು ಸಾಥ್ ಸಿಕ್ಕಂತಾಗಿ "ವಸು..... ಏನೋ ಅಷ್ಟು impact ಕೊಡ್ತಾಯಿಲ್ಲ....ಇನ್ನೊಂದು ಹೇಳ್ರಲಾ......" ಎಂದೆ....ಒಮ್ಮೆ ಆ ಪಕ್ಕ, ಈ ಪಕ್ಕ, ಮೇಲೆ, ಮುಂದೆ ನೋಡಿದ ವಸು..... ನಮ್ಮೆಲ್ಲರ ಹೆಸರುಗಳನ್ನು ಕೂಡಿಸುತ್ತಾ ಯಾವುದಾದರು ಹೆಸರು ಬರುತ್ತದೆಯಾ?? ಗಮನಿಸಲು ಮುಂದಾದರು..... ಒಮ್ಮೆಲೇ ಬೋಧಿ ವೃಕ್ಷದ ಕೆಳಗೆ ಬುದ್ಧನಿಗೆ ಜ್ಞ್ಯಾನೋದಯವಾದಂತೆ...., ಮುಂದಿನ desk ನ ಮೇಲಿಂದ ಒಂದು paper ಬದಿಗೆ ಸೆಳೆದು, "ಹೇ.... ನಮ್ಮ ಹೆಸರುಗಳ ಮೊದಲನೆ ಅಕ್ಷರಗಳನ್ನು ಸೇರಿಸಿದರೆ ಏನಾದರೂ ಬರಬಹುದಾ?????" ಎಂದು ಯೋಚಿಸಿ.....ತಾನೇ ಅದರಲ್ಲಿ ಎಲ್ಲರ ಹೆಸರುಗಳನ್ನು ಗೀಚಿಕೊಳ್ಳಲು ಶುರುವಾದರು......

"ಆನಂದ್.......... ಆ"......
"ಮಹಂತೇಶ್......... ಮ".....

ಅಲ್ಲಿಯ ವರೆಗೂ..... ತನಗೆ ಇದ್ಯಾವುದರ ಸಂಬಂಧವೂ ಇಲ್ಲದಂತೆ, ತಲೆಯನ್ನು ಆಗೊಮ್ಮೆ ಈಗೊಮ್ಮೆ ಅಲ್ಲಾಡಿಸುತ್ತಾ..... ಕಪ್ಪನೆಯ ಗುಂಡನ್ನು ಎಲ್ಲಾ "ಕೋನ???!!!!"ಗಳಿಂದಲೂ ನೋಡುತ್ತಾ, ಯಾವುದೋ logo design ಮಾಡುತ್ತಿದ್ದ "ಹ್ಯಾಪಿ" ಹಿಂದೊಮ್ಮೆ ತಿರುಗಿ.... ಘಂಟೆ ಹೊಡೆದಂತೆ..... "ಅಮಾವಾಸ್ಯೆ"... ಎಂದೊಮ್ಮೆ ತನ್ನ ಆಸ್ತಮ ಅಜ್ಜಿಯ "ಖ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್" ನಗು ನಕ್ಕಿದ್ದೆ,.... ಅಮಾವಾಸ್ಯೆಯಲ್ಲಿ ಚಂದ್ರ ಕಂಡವನಂತೆ ನಾನೂ ನನ್ನ ಹುಚ್ಚು ಶೈಲಿಯಲ್ಲಿ..... super ಹೆಸರು ರೀ mast ಇದೆ...... ಎಂದು ಅವರ ನಗುವಿನೊಡನೆ ನನ್ನ ನಗುವನ್ನೂ ಬೆರೆಸಿದೆ...... "ವಸು" ಈ ಹುಚ್ಚರು ಏಕೆ ಹೀಗೆ ನೆಗುತ್ತಿದ್ದಾರೆ?? ಎನ್ನುವಂತೆ ಒಂದು expression ಕೊಟ್ಟು... ಮತ್ತೆ ತಾನು ಗೀಚುತ್ತಿದ್ದ paper ಅನ್ನು ಎರಡು ಸಾರಿ ಹಾಗೆ ಹೀಗೆ ನೋಡಿ.......,"ಹೇಏಏಏಏಏ...... ಈ letters ಕೂಡಿಸಿದ್ರು....ಹಾಗೆ ಬರುತ್ತೆ.... "ಅಮವಾಸ್ಯೆ"....."
ಎಂದರು....

ಹ್ಯಾಪಿ ಇನ್ನೆರಡು ಭಾರಿ " ಖ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್" "ಖ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್".... ಮಹಂತು........"Oh......Sh*t"...

ಹಾಗೇ ಎಲ್ಲರ ನಗುವಿನೊಂದಿಗೆ ಹುಟ್ಟಿಕೊಂಡಿತ್ತು... ನಮ್ಮ blog, "ಅಮವಾಸ್ಯೆ"..


Blogಏನೋ ಶುರುವಾಯ್ತು..... ಆದರೆ ಬರೆಯುವುದು ಏನನ್ನು???? ಅಂತಹ ಸಾಧನೆ ಏನು ಮಾಡಿದೀವಿ ನಾವು???ಅದು ವರೆಗೂ ಯೋಚಿಸದಿದ್ದ ಪ್ರಶ್ನೆ ತನೇ ತಾನಾಗಿ ಎಲ್ಲರ ಮನಸ್ಸಲ್ಲಿ ಮನೆಮಾಡಿತ್ತು....,ನನ್ನನ್ನು ಹೊರತುಪಡಿಸಿ!!!..


"ವಿಶೇಷವಿರುವುದು ಸಾಧನೆಯಲ್ಲಲ್ಲ ಅದರ ಹಾದಿಯಲ್ಲಿ".....

"ಕಥೆ ಬರೆಯಲು ಕನಸು ಕಾಣಬೇಕು, ನಿಜ ಹೇಳಲು ಮನಸು ಮಾಡಬೇಕು".... ಎಂದೋ, ಎಲ್ಲೋ ಕೇಳಿದ್ದ ಪದಗಳು ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು....Company join ಆದ ಕೆಲವೇ ದಿನಗಳಲ್ಲಿ ಗಾಜಿನಂತಿರುವ ಇವರ ಮನಸ್ಸನ್ನು ಅರಿತಿದ್ದ ನನಗೆ ಇವರ ಬಗ್ಗೆ ತಿಳಿಸಲು ಪದಗಳನ್ನು ಹುಡುಕುವ ಅವಷ್ಯಕತೆ ಇರಲಿಲ್ಲ....

ತನ್ನ ಹಸಿವಯ್ಸಿನಲ್ಲಿ ಎತ್ತರ, ತಗ್ಗುಗಳನ್ನು ಸಮನಾಗಿ ಕಂಡು, ತಾನೇ ತನ್ನ ಹಾದಿಯನ್ನು ನಿರ್ಮಿಸಿಕೊಂಡು, ಯಾವುದಕ್ಕೂ ತಲೆಬಾಗದ ಮರದಂತೆ ನಿಂತಿರುವ "ಹ್ಯಾಪಿ".....

ಜವಾಬ್ದಾರಿಯನ್ನು ಹೆಗಲಿಗೇರಿಸಿ, ತನ್ನ ಕರ್ತವ್ಯಗಳನ್ನು ಚಾಚೂ ತಪ್ಪದೆ ನೆರವೇರಿಸಿ, ಕಷ್ಟಗಳನ್ನು "ಎದುರಿಸಿ".... ಅಲ್ಲ.... "ಹೆದರಿಸಿ", ಗಾಳಿಗೆ ಎದೆಯೊಡ್ಡಿ ನಿಂತ ಬೆಟ್ಟದಂತಿರುವ "ವಸು"....

ಕಿರಿ ವಯಸ್ಸಿನಲ್ಲಿ ದುಡಿಯಲು ಮನಸ್ಸು ಮಾಡಿ, ಪ್ರತಿಯೊಬ್ಬರೊಡನೆ ತಾನೊಬ್ಬನಾಗಿ, ಸ್ನೇಹಕ್ಕೆ ತಾನೊಂದು ಹೆಸರಾಗಿ, ಕಷ್ಟದಲ್ಲಿರುವವರನ್ನು ಕಂಡು ತನ್ನ ಕಣ್ಣುಗಳನ್ನು ಹಸಿ ಮಾಡಿಕೊಳ್ಳುವ "ಮಹಂತು"......

ಪುಟಗಳೇನು?......... ಪುಸ್ತಕಗಳನ್ನು ಬರೆಯಬಹುದು.....

ಇದೇ ನಮ್ಮ Team...... Highs or Lows.... Always Together

ಮೊದಲನೆಯ ದಿನ ಬ್ಲಾಗ್ ಓದಿದ ವಸು "ಬ್ಲಾಗ್ ಸ್ವಲ್ಪ Serious ಆಗಿರಲಿ" ಎಂದು ತಮ್ಮ Military style ಅಲ್ಲಿ ಹೇಳಿದ್ದರು, "ಅರೆ.... ಹಾಗಿರಬೇಕೆಂದರೆ Blog ಏನಕ್ಕೆ ಬರೆಯೋದು?? Website ಮಾಡೋಣ" ಎಂದು ಕಿಚಾಯಿಸಿ ಬಂದಿದ್ದೆ.... ಆದರೆ ಈ Post ತಾನೆ ತಾನಾಗಿ serious ಆಗುತ್ತದೆಂದು ತಿಳಿದಿರಲಿಲ್ಲ....!!!!...

"Zindagi aur kuch bhi nahi.....Teri meri kahani hain" ಎಂದು ಹೇಳುತ್ತಾ ಇನ್ನು ನಮ್ಮ officeನ ಒಂದೊಂದೇ ಮಗ್ಗಲುಗಳನ್ನು ನಿಮ್ಮ ಮುಂದೆ ಪರಿಚಯಿಸುತ್ತೇವೆ...its for fun...ಓದಿ ನಕ್ಕುಬಿಡಿ...ನಿಮ್ಮ ನಗು ನಮಗೆ ಅಮೂಲ್ಯ. :-D

2 comments:

  1. Okays.....Yeno naan comment hakidre beeltillappo... hinde haakidd comment kaansidre ,idna side ge haaaku...
    Summary of comment no 1> Chennagi dabbakidiya inna chennagi dabbaku

    ReplyDelete
  2. ಮುಂದಿನ ಸಂಚಿಕೆಗಾಗಿ ಹಂಬಲಿಸುತ್ತಿರುವ ..........
    -ನಿಮ್ಮ ಅಭಿಮಾನಿ.

    ReplyDelete