
ಚಿತ್ರ ನಿರ್ದೇಶನ ಮತ್ತು ಛಾಯಾಗ್ರಹಣಕ್ಕೆ ನಮ್ಮ ಮಿಲ್ಟ್ರಿ ಅವರಿಗೆ ಹೇಳಿ ಒಪ್ಪಿಸಿದ್ದಾಗಿದೆ. ಸಂಗೀತ ಮಿಲ್ಟ್ರಿ ಫ್ರೆಂಡ್ "ಕಿಂಗ್" ಎನ್ನುವವರು ಮಾಡಿಕೊಡುತ್ತಾರಂತೆ.
ಈ ಮಂತ್ರವಾದಿ ಅಲಿಯಾಸ್ ನಿತ್ಯಾನಂದ ಸ್ವಾಮಿ ಎಷ್ಟು ಬ್ಯುಸಿ ಅಂತ ನಿಮಗೆಲ್ಲರಿಗೂ ಗೊತ್ತು. ಅವರಿಗೆ ಫಿಲಂ ಫೇರ್ ಅವಾರ್ಡ್ ತಗೊಬೇಕೆಂದು ಆಸೆ!
ಟ್ರೈ ಮಾಡೋಣ ಅಂತಿದಾರೆ.
ಇನ್ನು ನಟ ಭಯಂಕರ ನಮ್ಮ ವಿಲನ್.
ಸಾರ್! ಒಂದು ಸಿನೆಮಾ ತೆಗೆಯೋಣ ಸಾರ್ ಅಂದ್ರೆ ಒಂದು ಏಕೆ ಹತ್ತು ತೆಗೆಯೋಣ ಬಿಡ್ರಿ. ಯಾಕೆ ಯೋಚೆನೆ ಮಾಡ್ತಿರ ಅಂತ ಹೇಳಿದಾಗ ನಮಗೆ ಎಲ್ಲಿಲ್ಲದ ಸಂತೋಷ. ( ಅವರಿಗೆ ಇನ್ನು ವಿಲನ್ ಪಾತ್ರ ಅಂತ ಹೇಳೇ ಇಲ್ಲ. ಇನ್ನು ಹಿರೋ ಅಂತ ತಿಳ್ಕೊಂಡಿದಾರೆ. ದಯವಿಟ್ಟು ಸದ್ಯ ನೀವು ಹೇಳಬೇಡಿ.)
ಈ ಹಿರೋದೇ ಸಮಸ್ಯೆ. ತುಂಬಾ ಕಾಮಟೆಶೇನ್. "ಲವರ್ ಬಾಯ್" ಎಂಬ ಖ್ಯಾತಿ ಬೇರೆ. ಇವರಿಲ್ಲದೆ ಹುಡುಗಿಯರು ಸಿನೆಮಾನೇ ನೋಡೋಲ್ಲ ಅಂತಾರೆ! ಅದಕ್ಕೆ ಅವರನ್ನು ಒಪ್ಪಿಸುವಂತೆ ನಿತ್ಯಾನಂದ ಸ್ವಾಮಿಜಿಗೆ ಕೇಳಿದ್ದೇವೆ! ನೋಡೋಣ.
ಇನ್ನು ಲೋಕೇಶನ್, ಸ್ಕ್ರಿಪ್ಟ್, ಡೈಲಾಗ್ ಮುಖ್ಯವಾಗಿ ಪ್ರೋಡುಸರ್ ಹುಡುಕಬೇಕು. ಕನ್ನಡ ಕಲಾಭಿಮಾನಿಗಳು ನಮ್ಮನ್ನು ಕೈ ಬಿಡೋಲ್ಲ ಅಂತ ನಂಬಿಕೆಯ ಮೇಲೆ "ಅಮಾವಾಸ್ಯೆ" ಯ ಒಳ್ಳೆಯ ದಿನದಂದು ಮುಹೂರ್ತ ಮಾಡಿ ಆಗಿದೆ.
ಇದೀಗ್ ಬಂದ ಸುದ್ದಿ ! ನಮ್ಮ ಮಿಲ್ಟ್ರಿ ಪೋಲಿಸ್ ಪಾರ್ಟ್ ಗೆ ಒಪ್ಪಿದ್ದಾರೆ. ಸಧ್ಯ ನಿರ್ದೇಶನ ಮತ್ತು ಛಾಯಾಗ್ರಹಣದ ಸಂಭಾವನೆ ಮಾತ್ರ ಕೊಟ್ರೆ ಸಾಕಂತೆ.
ವಿಶೇಷ ಸೂಚನೆ: ಹೀರೋಯಿನ್ ಹುಡುಕಾಟ ಭರದಿಂದ ಸಾಗಿದೆ. ನಿಮ್ಮ ಸುಂದರವಾದ (!?) ಫೋಟೋ ನಮಗೆ ಕಳಿಸಿ ಕೊಡಿ. (ಸಿನೆಮಾ ಹೆಸರಿನಂತೆ ಇದ್ದರೆ ಬೇಡ ). ಆಯ್ಕೆ ದಿನಾಂಕ ತಿಳಿಸಲಾಗುವುದು.
Good work Anand....please name the star-cast...
ReplyDeleteಓಕೆ ನನಗೊಂದು ಟಿಕೆಟ್ ಇರಲಿ..
ReplyDeleteಶಿವಾ..... ಇದೇನೋ ಭಾರೀ Star Cast ಇರೊ ಹಾಗೆ ಕಾಣ್ತಾ ಇದೆ... ಚಿತ್ರೀಕರಣ ಸುಸೂತ್ರವಾಗಿ ಸಾಗಲಿ...
ReplyDeleteThis comment has been removed by the author.
ReplyDeleteಹ್ಯಾಪಿ ತೆರೆ ಮರೆಯ ಕಥೆ ಸಾಕು ಸ್ವಲ್ಪ ತೆರೆ ಮೇಲಿನ ಕಥೆ ಹೇಳ್ತಿರಾ
ReplyDelete