Tuesday, August 31, 2010

ನಾ ಕಂಡ "ಕವಲು"

ಶ್ರೀಯುತ ಎಸ್.ಎಲ್ ಭೈರಪ್ಪನವರಿಗೆ ಅಭಿನಂದನೆಗಳು, ಕವಲು ಕಾದಂಬರಿಯ ಮೂಲಕ ಪ್ರಸ್ತುತ ಸಾಮಾಜಿಕ ಜೀವನವು ಎತ್ತಣ ಸಾಗುತ್ತಿದೆ ಎಂದು ಎತ್ತಿತೋರಿಸುವ ಪ್ರಾಮಾಣಿಕ ಪ್ರಯತ್ನ ಇಲ್ಲಿ ಅಗಿದೆ ಎಂದು ನನ್ನ ಅನಿಸಿಕೆ. ಕಾಲಯಾವುದೇ ಆಗಿರಲಿ ಯುಗ ಏಷ್ಟೇ ಆಧುನಿಕವಾಗಿರಲಿ, ಯಾವ ಕಾಲದಲ್ಲಾದರೂ ಹೆಣ್ಣು ಮತ್ತು ಗಂಡು ಹೇಗಿರಬೇಕು. ಅದರಲ್ಲೂ ಎಲ್ಲಾ ಕಾಲದಲ್ಲೂ ಹೆಣ್ಣಿನ ಸ್ಥಾನಮಾನ ಮತ್ತು ಹೆಣ್ಣುತನ ಇದರ ಬಗ್ಗೆ ಬರೆದು ಮುಂದಿನ ಪೀಳಿಗೆ ಯುವಕ-ಯುವತಿಯರು ಹೇಗೆ ಆರೋಗ್ಯಕರವಾದ ಸಮಾಜವನ್ನು ಕಟ್ಟಬೇಕು ಎಂಬುದನ್ನು ಸೂಕ್ಷವಾಗಿ ಬಿಂಬಿಸಿದಂತಿದೆ.

೧. ತಮ್ಮ ಕೆಲ ಸರಕಾರಿಕಛೇರಿಗಳು ಯಾವರೀತಿ ಸಮಾಜವನ್ನು ಕಾಯಬೇಕಾದ ಕೆಲಸವನ್ನು ಬಿಟ್ಟು, ಸರಕಾರಿ ಹುದ್ದೆ ಅವರಿಗೆ ದುಡ್ಡುಮಾಡುವ ಒಂದು ಹುದ್ದೆ ಎಂದು ತಿಳಿದು, ತಮ್ಮ ಕರ್ತವ್ಯದಿಂದ ಹೇಗೆ ವಿಮುಖರಾಗಿದ್ದಾರೆ ಎಂಬುದು ತಿಳಿಯುತ್ತದೆ.

೧. ಸ್ತ್ರೀಪರ ಸಂಘಟೆಗಳಲ್ಲಿ ತೊಡಗಿಸಿಕೊಂಡಿರುವ ದೊಡ್ಡ ಹುದ್ದೆಯ, ದೊಡ್ಡ ಹೆಸರಿನ ವ್ಯಕ್ತಿಗಳ ಇನ್ನೊಂದು ಮುಖವನ್ನು ಇಲ್ಲಿ ತೋರಿಸಲಾಗಿದೆ.

೨. ನಮ್ಮ ಹೆಚ್ಚಿನ ಕಾನೂನು ಸ್ತ್ರೀ ಪರವಾಗಿದೆ, ಪೂರ್ವಾಪರ ವಿಚಾರಿಸದೆ ಹೆಣ್ಣೆಂಬ ದೃಷ್ಟಿಯಿಂದ ಅವಳಿಗೆ ಹೆಚ್ಚಿನ ಸಹಕಾರ ನೀಡುತ್ತಿದೆಯೋ ಇಲ್ಲಾ ಅಲ್ಲೂ ಕಾನೂನಿ ಹೆಸರಿನಲ್ಲಿ ಹೆಣ್ಣಿನ ಮೇಲೆ ದಬ್ಬಾಳಿಕೆ ನಡೆಸುವರೋ ತಿಳಿಯದು.

೩. ಹೆಣ್ಣು ಎಷ್ಟೇ ವಿದ್ಯಾವಂತಳಾದರು, ಅವಳು ಎಷ್ಟೇ ಆಧುನಿಕತೆಯನ್ನು ಮೈಗೂಡಿಸಿಕೊಂಡರು,  ಭಾರತವೇ ಆಗಲೀ ಅಥವಾ ಪಾಶ್ಚಿಮಾತ್ಯ ದೇಶಗಳೇ ಆಗಲಿ, ಹೆಣ್ಣು ಎಂದಿಗೂ ಗಂಡಿನಂತೆ ಇರಲು ಸಾಧ್ಯವಿಲ್ಲ. ಅಂದರೆ ಹೆಣ್ಣಿಗೆ ಅವಳದೇ ಆದ ಭಾವನೆಗಳು, ಸೂಕ್ಷ್ಮಗಳು ಇರುತ್ತವೆ.  ಇದರಲ್ಲಿ ಬಳಸಿದ ಪದದಂತೆ, ದೇಹಭಾದೆಯನ್ನು ತೀರಿಸಿಕೊಳ್ಳುವ ಸಲುವಾಗಿ ಹೆಣ್ಣು ಏಷ್ಟೇ ಗಂಡಸರ ಸಂಗಮಾಡಿದರೂ, ಹೆಣ್ಣಿಗೆ ಹೆಣ್ಣುತನ ಎಂಬುದು ಯಾವಗಲೂ ಇರುತ್ತದೆ.  ಇತರದೇಶಗಳಲ್ಲಿ ಕಾಮವು ಮುಕ್ತವಾಗಿದೆ, ನಾವೂ ಯಾಕೇ ಕಾಮವನ್ನು ಮುಕ್ತವಾಗಿ ಮಾಡಬಾರದು ಎಂದು ಇಲ್ಲಿನ ಸ್ತ್ರೀಯರ ಮೊಂಡುವಾದಕ್ಕೆ ಅರ್ಥವೇ ಇಲ್ಲ... ನಾನು ಮೊದಲೇ ಹೇಳಿದಂತೆ ಹೆಣ್ಣಿಗೆ ಅವಳದೇ ಅದಂತಹ ಕೆಲವು ಸೂಕ್ಷ್ಮಗಳಿರುತ್ತವೆ, ಕೊನೆಗೆ ಅವಳಿಗೆ ನಾನು ಒಂಟಿ ಎಂಬ ಭಾವನೆ ಬರಲು ಶುರುವಿಡುತ್ತದೆ.  ನನ್ನ ದೇಹದ ಸೌಂದರ್ಯ, ಕಸುವು ಮುಗಿದ ಮೇಲೆ ಮುಂದೇನು ನಾನು ಎಲ್ಲರಿಂದಲೂ ದೂರವಾಗುತ್ತೇನೆ ಎಂಬ ಸತ್ಯ ಅರಿವಾಗುತ್ತದೆ.

ಇಲ್ಲಿ ಬರುವ ಮಂಗಳೆ ಎಂಬ ಪಾತ್ರದ ಮೂಲಕ ನಮಗೆ ತಿಳಿಯುತ್ತದೆ. ಅವಳು ಮನಸ್ಸಿನಲ್ಲಿ ಇನ್ನೊಮ್ಮೆ ತಾಯಿಯಾಗುವ ತಾಯ್ತನವನ್ನು ಅನುಭವಿಸುವ ಆಸೆಯಾಗುತ್ತದೆ. ಆದೆರೆ ಹೇಗೆ ಎಂಬ ಸತ್ಯ ಅರಿವಾಗಿ ಸುಮ್ಮನಾಗುತ್ತಾಳೆ.

ಇಲ್ಲಿ ಬರುವ ಒಂದು ಕಾಲೇಜ್ ರೀಡರ್ ಪಾತ್ರವು ಹೆಣ್ಣು ಎಷ್ಟೇ, ವಿದ್ಯಾವಂತಳಾದರೂ, ಬುದ್ಧಿ ಜೀವಿಗಳಂತೆ ವರ್ತಿಸಿದರೂ, ಏಷ್ಟೇ ಹಠಮಾಡಿದರೂ, ಕೊನೆಗೆ ಅವಳಿಗೂ ಒಂದು ಗಂಡಿನ ಪೂರ್ಣಪ್ರಮಾಣದ ಸಹಕಾರ ಬೇಕೆನ್ನಿಸುತ್ತದೆ. ಅದೇ ಸಹಕಾರವನ್ನು ಅವಳು ತನ್ನ ಗಂಡನಲ್ಲಿ ಇದ್ದಿದ್ದರೆ  ಅವಳೀಗೆ ಒಳಿತಾಗುತ್ತಿತು.

ನನ್ನ ಪ್ರಕಾರ, ಹೆಣ್ಣಿಗೆ ವಿದ್ಯಾಭ್ಯಾಸ ಸ್ವಾವಲಂಬನೆ ಎಲ್ಲವೂ ಬೇಕು, ಆದರೆ ಒಂದು ಹೆಣ್ಣಿಗೆ ಯಾವುದೇ ಸಂಧರ್ಬದಲ್ಲಿ ಒಂದು ಗಂಡಿನ ಆಸರೆ ಬೇಕೆಬೇಕು. ಮುಂದೆ ಏಷ್ಟೇ ಅಹಂ ತೋರಿಸಿದರು ಒಳೊಗೊಳಗೆ ನೋವು ಇದ್ದೇ ಇರುತ್ತದೆ. ಇದಕ್ಕೆ ಮುಖ್ಯಕಾರಣ ಹೆಣ್ಣು ವಿದ್ಯಾವಂತಳಾದರೂ, ಅವಳ ಮನಸ್ಸು ದೇಹ ಇನ್ನೂ ಹೆಣ್ಣಿನದೆ ಅವಳು ಮಾನಸಿಕವಾಗಿ ಸಬಲೆಯಾಗಿಲ್ಲ.  ವಿದ್ಯೆ ಎಂದರೆ, ಸಾಮಾಜದಲ್ಲಿ ಗಂಡನನ್ನೂ ಎದುರುಹಾಕಿಕೊಂಡು ನಮಗೆ ಗಂಡನಿಂದ ಏನೂ ಆಗಬೇಕಾಗಿಲ್ಲ ನಾವು ಸಬಲೇ ಎಂರ್ಥ ಅಲ್ಲ.

೫. ಹೆಣ್ಣು ಎಷ್ಟೇ ವಿದ್ಯಾವಂತೆ ಆಧುನಿಕ ಮಹಿಳೆ ಎಂದು ಹೇಳಿ ತಪ್ಪುದಾರಿ ಹಿಡಿದರೆ ಅವಳೇ ಮುಂದೆ ಅದರ ಕೆಟ್ಟಫಲವನ್ನು ಅನುಭವಿಸಬೇಕಾಗುತ್ತದೆ. ಹೆಣ್ಣಿಗೆ ತನ್ನದೇ ಆದ ಕೆಲವು ನಿಬಂಧನೆಗಳಿವೆ, ಭಾರತೀಯ ನಾರಿಗೆ ತನ್ನದೇ ಆದ ಗೌರವವಿದೆ. ಮನೆಯಲ್ಲಿ ಕಷ್ಟ ಇದೇ ಎಂದು ಮಾಂಸದದಂಧೆ ಮಾಡುವದು ಎಲ್ಲಿಯ ನ್ಯಾಯ. ಹೀಗೆ ಮಾಡಿದಲ್ಲಿ ನಾವೇ ಗಂಡಸಿರಿಗೆ ಮಣೆಹಾಕಿಕೊಟ್ಟ ಹಾಗೇ ಅಗುವದಿಲ್ಲವೇ.  ನಾವೇ ಸಮಾಜವನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡಿದ ಹಾಗೆ ಅಲ್ಲವೇ.

೬. ಒಂದು ಅಂಶವೆಂದರೆ, ಹೆಣ್ಣು ಒಬ್ಬ ಗಂಡಸಿನ ಬಾಳಿನಲ್ಲಿ ಎಷ್ಟು ಮುಖ್ಯ, ಮತ್ತು ಒಂದು ನಿಜವಾದ ಹೆಣ್ಣು ಗಂಡಿನ ಯಶಸ್ಸಿನಲ್ಲಿ ಹೇಗೆ ಭಾಗಿಯಾಗಿರುತ್ತಾಳೆ ಎಂದು ವೈಜಯಂತಿ ಎಂಬ ಪಾತ್ರದ ಮೂಲಕ ತಿಳಿಸಿದ್ದಾರೆ.  ಹಾಗೇ ಹೆಣ್ಣು ತನ್ನ ಸೀಮಿತದಲ್ಲಿ ಇದ್ದಲ್ಲಿ ಸಂಸಾರ ಹೇಗೆ ಸುಂದರವಾಗಿರುತ್ತದೆ, ಮತ್ತು ಗಂಡಸಿಗೆ ಎಲ್ಲಿಯೂ ತಪ್ಪು ಮಾಡುವ ಅವಕಾಶವನ್ನು ಅಥವಾ ಆಲೋಚನೆಯೇ ಬರದಂತೆ ಹೇಗೆ ಸಂಸಾರವನ್ನು ಸರಿದೂಗಿಸಿಕೊಂಡು ಹೋಗಬಹುದು ಎಂದು ಇಲ್ಲಿ ತಿಳಿಯಬಹುದಾಗಿದೆ.

೭. ಸಮಾಜಸೇವಕರು ಎಂದು ಹೇಳಿಕೊಳ್ಳುವ ರಾಜಕಾರಣಿಗಳ ಲಂಪಟ ಹಾಗೂ ಅವರ ಮುಂದೆ ಕುರಿಗಳಂತೆ ಆಡುವ ಬುದ್ಧಿ ಜೀವಿ ಸ್ತ್ರೀಯರು, ಅವರ ಪ್ರಾಭಾವದ ಮುಂದೆ ನನ್ನದೇನು ನಡೆಯೊಲ್ಲ ಎಂಬ ಬೇಸರ ಸಂಕಟ. ಅದಕ್ಕೋಸ್ಕರ ಎತ್ತಿಗೆ ಜ್ವರ ಬಂದರೆ ಕೋಣನಿಗೆ ಬರೆ ಎಂಬಂತೆ, ತಮ್ಮ ಗಂಡಂದಿರ ಮೇಲೆ ಸಿಟ್ಟು ತೀರಿಸಿಕೊಳ್ಳುವ ಪರಿ. ಅಂದರೇ, ಇಲ್ಲಿ ಹೆಣ್ಣು ಎಷ್ಟೇ ವಿದ್ಯಾವಂತಳಾದರೂ ಮಾನಸಿಕವಾಗಿ ಅಬಲೆ...

೮. ಈಗಿನ ಸಾಮಾಜವನ್ನು ಯುವಜನತೆ ಹೇಗೆ ಸರಿಪಡಿಸಬೇಕು ಎಂಬ ಸೂಕ್ಷ್ಮ, ತಾಯಿ ಏಷ್ಟೇ ವಿದ್ಯಾವಂತಳಾಗಿದ್ದರೂ, ಅವಳು ನಡೆಯುವ ದಾರಿಯು ಸರಿಯಾಗಿಲ್ಲ,  ನಾವು ಇದರಿಂದ ದೂರ ಇರಬೇಕು ಎಂಬ ಸೂಕ್ಶ್ಮವನ್ನು ಇಳಾ ಅವರ ಮಗಳ ಪಾತ್ರದಲ್ಲಿ ತೋರಿಸಿದ್ದಾರೆ. ಮತ್ತು ಸಮಾಜದಲ್ಲಿ ಇನ್ನೂ ಭಾತೃತ್ವ, ಕುಟುಂಬ ಸಂಸಾರ, ಹೊಂದಾಣಿಕೆ, ಎಂಬ ಪದಗಳು ಇನ್ನೂ ಇವೇ ಅವು ಅರ್ಥಕಳಕೊಳ್ಳಲಿಲ್ಲ ಎಂಬುದನ್ನು ತೋರಿಸಿದ್ದಾರೆ. ಹಿರಿಯರು ಇಂದಿನ ಪೀಳಿಗೆಯವರಿಗೆ ಯಾಕೆ ಬೇಕು ಅವರ ಅನುಭವ ಎಷ್ಟು ಮುಖ್ಯ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

೯. ಪುಟ್ಟಕ್ಕ ಎಂಬ ಪಾತ್ರದಮೂಲಕ ಹೆಣ್ಣನ್ನು ಹೀಗಳೆಯ ಬೇಡಿ, ಅವರಿಗೂ ಪ್ರೀತಿಯನ್ನು ನೀಡಿ ಎಂಬ ಸಂದೇಶವಿದೆ.

೧೧. ವರದಕ್ಷಿಣೆಯ ಬಗ್ಗೆ ಅವರು ಹೇಳುವ ಒಂದು ಮಾತು ತುಂಬಾ ಚೆನ್ನಾಗಿದೆ... "ವರದಕ್ಷಿಣೆ ತೆಗೆದುಕೊಳ್ಳುವುದು ತಪ್ಪಾದರೆ, ಕೆಲಸದಲ್ಲಿರುವ ಹೆಣ್ಣೇ ಬೇಕು" ಎಂಬುದು ಎಷ್ಟು ಉಚಿತ....

೧೦. ಇದರಲ್ಲಿ ಬರುವ ಎಲ್ಲ ಪಾತ್ರಗಳು ಒಂದು ಒಳ್ಳೆಯ ಸಂದೇಶವನು ನೀಡುತ್ತವೆ.  ಹಾಗೇ, ಹಳ್ಳಿ ಜೀವನ ಮತ್ತು ಹಳ್ಳಿಗಳ್ಳನ್ನು ಉಳಿಸಿ ಅವೇ ನಮ್ಮ ಜೀವಾಳ ಎಂಬ ಸೂಕ್ಶ್ಮ ಸತ್ಯವನ್ನು ಹೇಳಿದ್ದಾರೆ.

ಉಪಸಂಹಾರ....
ಇಲ್ಲಿ ನಾನು ತಿಳಿದುಕೊಂಡಿದ್ದರಲ್ಲಿ ಏನಾದರೂ ಆಭಾಸವಾಗಿದ್ದರೆ ಅದನ್ನು ಕ್ಷಮಿಸಿ, ಅದು ಸರಿ ಅಲ್ಲ ಇದು ಸರಿ ಎಂದು ಹೇಳುವ ಹಕ್ಕು ನಿಮಗಿದೆ. ಅದರಿಂದ ನಾನು ತಿದ್ದಿಕೊಳ್ಳುವಂತಾಗುತ್ತದೆ.

ಇನ್ನಾದರೂ, ನಮ್ಮ ಯುವಜನಾಂಗವು ಸುಂದರ ಸ್ವಾಥ್ಯವಾದ ಸಮಾಜವನ್ನು ಕಟ್ಟಲು ಈ ಮೂಲಕವಾದರು ಮುಂದಾಗಬೇಕು ಎಂಬುದು ಅವರ ಕನಸಾಗಿರಬಹುದು, ನಾವು ಅದನ್ನು ನನಸಾಗಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಬಹುದಲ್ಲವೇ...

ವಿದ್ಯೆಗೆ ವಿನಯವೇ ಭೂಷಣ, ಯುವಜನಾಂಗವು ಕೆಲವು ಬುದ್ಧಿಜೀವಿಗಳ ಹೋರಾಟ ಮೇಲ್ಮೈಯನ್ನು ಅಷ್ಟೇ ನೋಡದೆ ಅದರ ನಿಜವಾದ ಒಳ ಅರ್ಥವನ್ನು ಅರಿತು ಅವರಿಗೆ ಸಹಕರಿಸುವುದು ಒಳಿತು.

ಹೆಣ್ಣೊಂದು ಕಲಿತರೇ ಶಾಲೆಯೊಂದು ಕಲಿತಂತೆ, ಎಂಬ ಗಾದೆ ಇದೆ, ಹೆಣ್ಣು ಏಷ್ಟೇ ಮುಂದುವರಿದರೂ ಅವಳು ತನ್ನ ಹೆಣ್ಣು ತನವನ್ನು ಬಿಟ್ಟುಕೊಡಬಾರದು.  ಈಗ ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಬರಬಹುದು ಹಾಗಾದರೇ ಗಂಡು ಏನೇ ಮಾಡಿದರೂ ಅದು ಸರಿಯೇ, ಇಲ್ಲ ಖಂಡಿತ ತಪ್ಪು ಮಾಡಿದವರಿಗೆ ಶಿಕ್ಷೇ ಆಗಲೇ ಬೇಕು ಅದಕ್ಕೆ ಯಾರು ಹೊರತಾಗಿಲ್ಲ.  ಅದಕ್ಕೆ ಸ್ತ್ರೀಯರು ಮನಬಂದಂತೆ ವರ್ತಿಸಿ ಸಮಾಜದ ಆರೋಗ್ಯವನ್ನು ಹಾಳುಗೆಡವುವ ಅವಕಾಶವನ್ನು ಏಕೇ ಮಾಡಬೇಕು ಎಂಬುದು ನನ್ನ ಪ್ರಶ್ನೆ, ನಾವು ಹೆಣ್ಣನ್ನು ದೇವರೆಂದು ಪೂಜಿಸುತ್ತೇವೆ, ಆದರೆ ಯಾವುದೇ ದೇವತೆಯು ಸಾಮಾಜದ ಸ್ವಾಥ್ಯವನ್ನು ಹಾಳುಮಾಡುವ ಕೆಲಸವನ್ನು ಮಾಡಿದ ಯಾವುದೇ ಉದಾಹರಣೆ ನಮಗೆ ಎಲ್ಲೂ ಸಿಗುವುದಿಲ್ಲ... ತೀರಾ ಇತ್ತೀಚಿನವರಾದ ಶಾರಾದದೇವಿಯವರು ಸ್ತ್ರೀ ಕುಲಕ್ಕೆ ಒಂದು ಮಾದರಿ.  ಹಾಗೆಂದು ಸ್ತ್ರೀಯರು ಪುರುಷರದಬ್ಬಾಳಿಕೆಯನ್ನು ಸಹಿಸಿ ಎಂದು ನಾನೂ ಹೇಳುತ್ತಿಲ್ಲ ಅದಕ್ಕೇ ನಿವೇ ಅವಕಾಶ ಕೊಡಬೇಡಿ ಎಂಬುದು ನನ್ನ ಮಾತಿನ ಅರ್ಥ. ಎನಂತೀರಿ......

11 comments:

  1. ಕಾದ೦ಬರಿಯ ಸಕಾರಾತ್ಮಕ ಸಂದೇಶಗಳನ್ನು ಚೆನ್ನಾಗಿ ಹಿಡಿದಿಟ್ಟಿದ್ದಿರಾ...
    ಧನ್ಯವಾದಗಳು.

    ReplyDelete
  2. ಥ್ಯಾಂಕು ಸೀತಾರಾಮ ಸರ್... :)

    ReplyDelete
  3. ವಸುದೇಶ್,

    ಕಾದಂಬರಿಯನ್ನು ನಾನಿನ್ನು ಓದಿಲ್ಲ ಓದಬೇಕು. ನೀವು ಬರೆದ ಕೆಲವು ವಿಚಾರಗಳನ್ನು ನೋಡಿ ಖಂಡಿತ ಓದಬೇಕೆನಿಸುತ್ತದೆ.

    ReplyDelete
  4. "ಕವಲು" ಕಾದಂಬರಿಯಲ್ಲಿ ತಿಳಿಸಿರುವ ಸತ್ಯಾಸತ್ಯತೆಗಳು ಎಲ್ಲರೂ ಒಪ್ಪಿಕೊಳ್ಳಬೇಕದಂತಹುದು ನಿಜ, ಆದರೆ ಸಂಸಾರವೆಂಬುದು ಕವಲಾಗಬಾರದೆಂಬ ಬಯಕೆಯಿಂದ ಹೆಣ್ಣು ತನ್ನ ಕೆಲವು ಕಟ್ಟುಪಾಡುಗಳನ್ನು ಬದಿಗಿಟ್ಟು ಜೀವನವನ್ನು ನಡೆಸಲು ಮುಂದಾಗುತ್ತಾಳೇ ವಿನಃ ತಾನು ಸಬಲೆ ಎಂದು ತೋರಿಸಲು ಅಲ್ಲ. ಕೆಲವು ಪರಿಸ್ಥಿತಿಗಳು ಅವಳಿಗೆ ಬದುಕಲು ದಾರಿ ತೋರಿಸಿಕುಡುತ್ತವೆ.ಆದರೆ ತನ್ನ ಬದುಕು ಪರಿಪೂರ್ಣವಾಗಲು ಗಂಡನನ್ನು ಹಂಬಲಿಸುವಳು...ಅಲ್ಲಿ ಕೆಲವು ಅನರ್ಥಗಳಾದಾಗ ಮಾತ್ರ ತನ್ನ ನಿಲುವಿಗಾಗಿ ಗಂದಿನ ಆಸರೆ ತೊರೆಯುವಳು ... hum its ma openion any how its nice...

    ReplyDelete
  5. ವಸುಧೇಶ ಮೊನ್ನೆ ಸಿಕ್ಕಾಗ ನೀವು ಜಾರಿಕೊಂಡಿದ್ರಿ ಬ್ಲಾಗ್ ಹೆಸರು ಸಹ ಹೇಳಿರಲಿಲ್ಲ ಇವತ್ತು ಭೇಟಿ ಕೊಟ್ಟಿರುವೆ
    ನಿಮ್ಮ ತಂಡ ಅಪರೂಪದ್ದು. ಹಾಗೆಯೇ "ಕವಲು" ಬಗ್ಗೆ ಬರೆದ ನಿಮ್ಮ ಅನಿಸಿಕೆ ಸಕಾರಣವಾಗಿದೆ.
    ಬಿಡುವಿದ್ದಾಗ usdesai.blogspot.com ಕಡೆನೂ ಬರ್ರಿ...!

    ReplyDelete
  6. ನೀವ್ ಬರ್ದಿದ್ದು ಖರೆ ಅದ ಸರ್..,..ನಿಮ್ಮ ಪ್ರತಿಯೊಂದು ವಾಕ್ಯಾನೂ ಸರಿ., ಆದ್ರ ನಿಮ್ಮ ಕಡೇ ಶಬ್ದಗಳು 'ಸಮಾಜದ ಆರೋಗ್ಯ ಹಾಳ್ಮಾಡ್ಲಿಕ್ಕೆ ಅವಕಾಶಾ ಕೊಡಬ್ಯಾಡ್ರಿ' ಅನ್ನೊದರ ಬಗ್ಗೆ ನನ್ನ ಅನಿಸಿಕೆ ಎನಂದ್ರ ; ಏನೋ ಎಡವಟ್ಟ ಆಗೇದ ಅಂದ್ರ, ಅಲ್ಲೆ ಎರಡೂ ಕಡೆಯಿಂದ ತಪ್ಪು ನಡದದ ಅಂತನ...ಅರ್ಥ. ಅದು ಗೆಳೆಯರೊಳ ಇರಬಹುದು, ದಾಂಪತ್ಯದಲ್ಲೇ ಇರಬಹುದು.., ಇಬ್ಬರಲ್ಲಿ ಒಬ್ಬರು ಸರಿ ಇದ್ರೂ ಆ ವಿಶಯ ತಮ್ಮಲ್ಲೇ ಮುಚ್ಚಿಹೋಗಿ, ಹೊರಗಿನವರ ತನಕಾ ಬರೋದೇಇಲ್ಲ. ಇದಕ್ಕ ಕೆಲವರು..ಸ್ವಾತಂತ್ರ್ಯಕ್ಕ ಧಕ್ಕೆ ಅಥವಾ ಬರೇ ಒಬ್ಬರ ಯಾಕ್ ಸೊಲ್ಬೇಕು ಅನಬಹುದು....ಅದೆಲ್ಲಾ ಏನ್ ಇಲ್ರೀ...ಒಂದು ಸಿಂಪಲ್ ಮ್ಯಾಟರ್ ಏನಂದ್ರ 'ಮನ್ನಿಸೋ ಗುಣಾ' ಪ್ರತಿಯೂಬ್ಬರಲ್ಲೂ ಬೆಳೀಬೇಕು..ಗಂಡಾ ಹೆಂಡ್ತಿಯ., ಹೆಂಡ್ತಿ ಗಂಡನ ತಪ್ಪುಗಳನ್ನ ಅಲ್ಲೇ ಚಿವುಟಿ, ಪ್ರತೀದಿನಾನೂ ಹೊಸಾದು ಅಂತ ಶುರು ಮಾಡ್ಬೇಕು ಅನ್ನೊದು ಯಾವಾಗ ಮದುವಿ ಆದವರಿಗೆ, ಕ್ಯೂ-ನಲ್ಲೆ ನಿಂತವ್ರಿಗೆ ಈ ವಿಷಯ ತಿಳೀತದೋ ಆವಾಗ ಎಲ್ಲೂ ತಪ್ಪು ಇರೋದಿಲ್ಲಾ...ಕೆಲವರು, "ಅವರು ತಪ್ಪು ಮಾಡ್ತನ...ಹೋಗ್ಲಿ...ನಾವು ಕ್ಷಮಾ ಮಾಡ್ತನ...ಇರ್ಬೇಕೇನು" ಅನ್ನೋವ್ರು ಇದ್ದಾರ...ಅಂಥವ್ರಿಗೆ ನನ್ನ ಉತ್ತರ...ಯಾವ ವ್ಯಕ್ತಿಗೆ ತಾನು ಮಾಡಿದ್ದು ಘೋರ ಅಪರಾಧಾ ಅನ್ನೊ ಅರಿವು ಇರ್ತದೋ, ಅಂಥಾ ವ್ಯಕ್ತಿನ್ನ ಕ್ಷಮಾ ಮಾಡಿದ ಆ ವ್ಯಕ್ತಿಮ್ಯಾಲೆ ಅಪರಾಧಿಗೆ...ಗೌರವ, ವಿಶ್ವಾಸಾ ಹೆಚ್ಚಾಗ್ತದ...ಆವಾಗ ಆಜೀವನ ಪರ್ಯಂತ ಒಬ್ಬರಿಗೊಬ್ಬರು ದಾಸರಾಗ್ತಾರ... ಕೆಲವು ಮುಯ್ಯಿಗೆ-ಮುಯ್ಯಿ ಅನ್ನೋ ತಿರಸಷ್ಟ ಮಂದಿಗೆ ಬೇಕಂದ್ರ ಒಂದು ಕಿವಿಮಾತು ಹೇಳ್ತೇನಿ...Forgiveness is a sweetest revenge, ಹಿಂಗಾಗಿ ಮನ್ನಿಸೋಗುಣದಿಂದ ಮನಷ್ಯನಲ್ಲೆ ಮುಂದ ದೈವೀ-ಭಾವಾ, ಅಹಿಂಸಾ,ಆಧ್ಯಾತ್ಮ ಅನ್ನೋ ದೇವತಾ-ಗುಣಗಳು ಬೆಳೆದು, (ಕೆಲವೊಬ್ರಿಗೆ ಅಂತೀವಲ್ಲಾ ನಾವು...'ದೇವರಂಥಾ ಮನುಷ್ಯ' ರೀ ಅಂತ.... )ಸಮಾಜದ ಎಲ್ಲಾರೂ ಹಂಗ..ಆದ್ರು ಅಂದ್ರ, ಸಮಾಜದ ಆರೋಗ್ಯ ಕೆಟ್ಟದ ಅನ್ನೋ ಪ್ರಶ್ನೆನ...ಬರೋದಿಲ್ಲ.

    ಯಾಕೋ ಭಾಳ ಬರ್ದೇನಿ ಅನಸ್ತದ...ಇಲ್ಲಿಗೇ ಮುಗಿಸ್ತೀನಿ...ಯಾರಿಗರ ನನ್ನ ಭಾಷಾ ತಿಳದಿಲ್ಲಾ ಅಂದ್ರ ಹೇಳ್ರಿ....ಮತ್ತೋಮ್ಮೆ ಓದಿ ಹೇಳ್ತೇನಿ...!! .:)

    ReplyDelete
  7. ಖಂಡಿತ ಓದಿ ಶಿವು ಸರ್... ಥ್ಯಾಂಕು ನಾನು ಬರ್ದಿದ್ದನ್ನು ಓದಿ ನಿಮಗೆ "ಕವಲು" ಓದಬೇಕೆಂಬ ಹಂಬಲ ಬಂದಿದ್ದಕ್ಕೆ... :)

    ReplyDelete
  8. thank you umesh sir.. khandita nimma blogna visit madi follow madta irtini...

    ReplyDelete
  9. ಅನರ್ಥಗಳಿಗೆ ಹೆಣ್ಣು ದಾರಿ ಮಾಡಕೊಡಬಾರದೆಂಬುದೇ ನನ್ನ ನಿಲುವು... ಸಂಧ್ಯಾ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು....

    ReplyDelete
  10. Anonymous @ ವಾಸುಕಿ ನಿಮಗೆ comment barilikke inconvenience ಅಗಿದ್ದಕ್ಕೆ ಸಾರಿ... ನಿಮ್ಮ ನಿಲುವು ಸರಿ... ಧನ್ಯವಾದಗಳು... ನಿಮ್ಮ ಪ್ರಕಾರ ಗಂಡ-ಹೆಂಡತಿ ಇಬ್ಬರೂ ಒಬ್ಬರೊಬ್ಬರನ್ನು ಕ್ಷಮಿಸ್ತಾ, ಅನ್ಯೂನ್ಯವಾಗಿ ಇರಬೇಕು ಅಂತ ಅಭಿಪ್ರಾಯ ನನಗೆ ಖುಷಿ ಆಯ್ತು.... ಇಲ್ಲಿ ಮಂಗಳೆ ಎಂಬ ಪಾತ್ರದಮೂಲಕ ಹೆಣ್ಣು ಒಳ್ಳೆಯವರಾಗಿದ್ದಲ್ಲಿ ಸಂಸಾರ ಎಷ್ಟು ಸುಂದರವಾಗಿರುತ್ತದೆ ಎಂದು ನಮಗೆ ತಿಳಿಸಿದ್ದಾರೆ.... ಒಟ್ಟಾರೆಯಾಗಿ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.....

    ReplyDelete
  11. ಯಾವ ಕಾಲದಲ್ಲಾದರೂ ಹೆಣ್ಣು ಮತ್ತು ಗಂಡು ಹೇಗಿರಬೇಕು.......

    ಹೆಣ್ಣು ಒಳ್ಳೆಯವರಾಗಿದ್ದಲ್ಲಿ ಸಂಸಾರ ಎಷ್ಟು ಸುಂದರವಾಗಿರುತ್ತದೆ

    ಆದರೆ ಸಂಸಾರವೆಂಬುದು ಕವಲಾಗಬಾರದೆಂಬ ಬಯಕೆಯಿಂದ ಹೆಣ್ಣು ತನ್ನ ಕೆಲವು ಕಟ್ಟುಪಾಡುಗಳನ್ನು ಬದಿಗಿಟ್ಟು ಜೀವನವನ್ನು ನಡೆಸಲು ಮುಂದಾಗುತ್ತಾಳೇ ವಿನಃ ತಾನು ಸಬಲೆ ಎಂದು ತೋರಿಸಲು ಅಲ್ಲ

    ReplyDelete