Soಮಾರಿ ಕಟ್ಟೆ

ಕಣ್ಣು ತೆರೆದರೆ "ಜನನ" ಕಣ್ಣು ಮುಚಿದರೆ "ಮರಣ" ಜನನ ಮರಣಗಳ ನಡುವೆ ರೆಪ್ಪೆ ಆಡಿಸುವುದೇ "ಜೀವನ" ಆ ಕಣ್ಣನ್ನ ಆಡಿಸುವಾಗ ಸಿಗುವ ಇಂಪೆ "ಗೆಳೆತನ"
__________________________________________________________________________

ಗೆಳೆಯರೇ ಒಂದು ಸಂತೋಷದ ಸುದ್ದಿ... 
ಹಿಪ್ ಹಿಪ್ ಹುರ್ರೆ ನನಗೆ ತಿಳಿದಿದೆ!!! 
ಈ ಪ್ರಪಂಚ 2012 ಕ್ಕೆ ಮುಕ್ತಾಯ (ಪ್ರಳಯ) ಆಗ್ತಿಲ್ಲಾ.. 
ಯಾಕೆಂದರೆ ನಾನು ಈಗ ತಾನೆ ಟೊಮೆಟೊ ಸಾಸ್ ಬಾಟಲ್ ನೋಡ್ದೆ, ಅದರಲ್ಲಿ expire date 2013 ಅಂತಾ ಬರೆದಿತ್ತು ...
__________________________________________________________________________

ಮಗ : ಅಮ್ಮ ಗಾಂಧೀಜಿ ಈಗ ಇಲ್ವಾ 
ಅಮ್ಮ : ಇಲ್ಲಾ 
ಮಗ : ನೇತಾಜಿ 
ಅಮ್ಮ : ಇಲ್ಲಾ 
ಮಗ : ಅಂದ್ರೆ ಈಗ ಯಾರು ಒಳ್ಳೆಯವರು ಇಲ್ವಾ? 
ಅಮ್ಮ : ಹಾಗೆಲ್ಲ ಹೇಳಬಾರದು ಮಗು "ವಸುಧೇಶ್" ಅಂತಾ ಬೆಂಗಳೂರಿನಲ್ಲಿ ಇಗ್ಲೂ ಇದಾರೆ.... :)
__________________________________________________________________________

ತಂದೆ ಬಡವನಾದರೆ ಹಣೆಬರಹ..... ಆದರೆ, ಮಾವ (ವಧು/ವರನ ತಂದೆ) ಬಡವನಾದರೆ, ಅದು ನಮ್ಮ ದಡ್ಡತನ.....
(ಸುಮ್ನೆ ತಮಾಷೆಗೆ )
__________________________________________________________________________

ಘಾಟಿ ಮುದುಕಿ
ಒಂದು ದಿನ ಒಂದು ಹಣ್ಣು ಹಣ್ಣು ಮುದುಕಿ ನಾನು ಪ್ರಯಾಣಿಸುತ್ತಿದ್ದ ಬಸ್ಸಿಗೆ ಏದುಸಿರು ಬಿಡುತ್ತಾ ಹತ್ತಿದಳು, ಬಸ್ಸೋ ಆದಿನ ಫುಲ್ ರಷ್, ಮುದುಕಿಗೆ ಕೂಡಲು ಎಲ್ಲೂ ಜಾಗ ಸಿಗಲಿಲ್ಲ.  ಅವಳ ಕಷ್ಟವನ್ನು ಅರಿತ ಕಂಡಕ್ಟರ್, ಮುಂದುಗಡೆ ಕ್ಯಾಬಿನಲ್ಲಿ ಕೂಡುವಂತೆ ಸೂಚಿಸಿದ. ಮುದುಕಿಯು "ಹುಂ" ಎಂದು ಕುಳಿತು ಕೊಳ್ಳುತ್ತಾ, "ಅಪ್ಪಾ, ನಾನು ಚಾಮರಾಜ ಪೇಟೆಯಲ್ಲಿ ಇಳಿಬೇಕಪ್ಪಾ, ಸ್ಟಾಪ್ ಬಂದ ಕೂಡಲೇ ಹೇಳಪ್ಪಾ" ಎಂದು ಕಂಡಕ್ಟರ್ ಗೆ ಹೇಳಲು ಆಯ್ತು ಎನ್ನುತ್ತಾ ಟಿಕೇಟ್ ಕೊಡಲಾರಂಭಿಸಿದ.  ಬಸ್ಸು ಭರ್ತಿಯಾಗಿತ್ತು, ಕಂಡಕ್ಟರ್ ರ   ಗ್ರಹಚಾರವೋ, ಅದೃಷ್ಟವೋ  ಆದಿನ ಹೆಚ್ಚು ಮೆಹಿಳೆಯರೇ ತುಂಬಿದ್ದರು.  ಮುದುಕಿ ತನ್ನ ಸ್ಟಾಪ್ ಬಂದ ಕೂಡಲೇ ಹೇಳು ಎಂದು ಹೇಳಿದ್ದರಿಂದ ನಿರಾಳವಾಗಿ ಕುಳಿತ್ತಿದ್ದಳು. ಮುದುಕಿ ಇಳಿಯಬೇಕಾದ ಸ್ಟಾಪ್ ಕ್ಕಿಂತ ೨-೩ ಸ್ಟಾಪ್ ದಾಟಿ ಆದ ಮೇಲೆ, ನಾನು ಹಿಂದಿನ ನಿಲ್ದಾಣದಲ್ಲಿ ಇಳಿಯಬೇಕಾಗಿತ್ತು ಎಂದು ತಿಳಿದು, ಮುದುಕಿಯು ರೋಷದಿಂದ ಕಂಡಕ್ಟರ್ ನನ್ನು ತರಾಟೆಗೆ ತೆಗೆದುಕೊಂಡಳು.  ಆಗ ಕಂಡಕ್ಟರ್ ಸಮಾಧಾನದಿಂದ, ಅಜ್ಜಿ ಬಸ್ಸು ತುಂಬಾ ರಷ್ ಇದ್ದುದರಿಂದ, ನಿನ್ನಲ್ಲಿಗೆ ಬಂದು ಹೇಳಲಾಗಲಿಲ್ಲ, ಆದರೂ "ಸೀಟಿ" ಹೊಡೆದು ಇಳಿಯುವಂತೆ ಸೂಚಿಸಿದ್ದೆ ಎಂದನು. ಅದಕ್ಕೆ, ಆ ಮುದುಕಿಯು, ಹಾಸ್ಯ ಭರಿತ ದುಖಃದಿಂದ 'ಹೌದಪ್ಪ ನಿನೇನೋ "ಸೀಟಿ" ಹೊಡೆದೆ, ಆದರೆ ತಿರುಗಿ ನೋಡುವ ವಯಸ್ಸು ನನ್ನದಲ್ಲಪ್ಪ' ಎಂದು ನಗೆ ಚಟಾಕಿ ಹಾರಿಸಿದಳು. ನಾವೆಲ್ಲರೂ ಗೊಳ್ಳೆಂದು ನಕ್ಕು ನಕ್ಕು ಸುಸ್ತೋ ಸುಸ್ತು....

__________________________________________________________________________

ಪ್ಲಾಸ್ಟಿಕ್ ಸರ್ಜರಿ

ಪುಂಡ : ಡಾಕ್ಟ್ರೇ ಈ ಬಕೆಟ್ ಸಿಕ್ಕಾ ಪಟ್ಟೆ ಸೋರುತಿದೆ...... ರಿಪೇರಿ ಮಾಡಿಕೋಡ್ತೀರಾ ?

ಡಾಕ್ಟರ್ : ಮೂರ್ಖ.... ನಾನ್ಯಾರೂಂತ ಗೊತ್ತಿದೆಯಾ ನಿನಗೆ ?

ಪುಂಡ : ಗೊತ್ತು ಡಾಕ್ಟ್ರೇ. ನೀವು ಪ್ಲಾಸ್ಟಿಕ್ ಸರ್ಜರಿಯಲ್ಲಿ ಫೇಮಸ್ಸಲ್ವಾ ?

                                                                                                  -ಕದ್ದಿದ್ದು
__________________________________________________________________________

"ಮಡದಿಯನು ಬಡಿದಾನು ಮನದೊಳಗೆ ಮರುಗಿದನು 
ಒಳಗ್ಹೋಗಿ ಕಾಲ ಹಿಡಿದಾನು 
ಒಳಗ್ಹೋಗಿ ಕಾಲ ಹಿಡಿದಾನು ತಾ ಕೇಳಿದನು 
ನಾ ಹೆಚ್ಚೊ ನಿನ್ನ ತವರ್ಹೆಚ್ಚೊ" 
(ಸಂಗ್ರಹ)
__________________________________________________________________________

ಜೀವನವೆಂದರೆ, ಗತದ ತಪ್ಪನ್ನು ವರ್ತಮಾನದಲ್ಲಿ ಆಲೋಚಿಸಿ ಭವಿಷ್ಯತ್ತಿನಲ್ಲಿ ತಿದ್ದಿಕೊಳ್ಳುವುದೇ ಜೀವನ.
__________________________________________________________________________

ಪ್ರೇಮವೆಂದರೆ - ನಾವಿಲ್ಲದಿರುವಾಗ ಇತರರು ನಮ್ಮ ಬಗ್ಗೆ ಅನುಕ್ಷಣ ಆಲೋಚಿಸುತ್ತಾ ಇರುವರೆಂಬ ನಂಬಿಕೆ!

__________________________________________________________________________

ವಾಸ್ತವವಾಗಿ ನಮ್ಮ ಮಕ್ಕಳು ಕಂಪ್ಯೂಟರ್ ಗಳು. ಅವರಿಗೆ ನಾವು ನಮ್ಮ ಅಭ್ಯಾಸಗಳನ್ನು, ಮೂರ್ಖತೆಗಳನ್ನು, ಹೆದರಿಕೆ, ನಂಬಿಕೆಗಳನ್ನು ’ಫೀಡ್ ' ಮಾಡುತ್ತೇವೆ. ಜಾತಿ, ಸೆಕ್ಸ್, ನೈತಿಕ ಮೌಲ್ಯ ಇಂಥವನ್ನು ಅರೆದು ಹುಯ್ಯುತ್ತೇವೆ. ಅವರ ಮೆದುಳನ್ನು ನಮಗೆ ಬೇಕಾದ ರೀತಿಯಲ್ಲಿ ಟ್ಯೂನ್ ಮಾಡುತ್ತೇವೆ. ನಂತರ ಕಂಪ್ಯೂಟರ್ ಕೆಟ್ಟುಹೋಗಿದೆ ಎಂದೂ, ದೇಶ ಸರಿಯಾಗಿಲ್ಲವೆಂದು ನೊಂದುಕೊಳ್ಳುತ್ತೇವೆ. 
(ಸಂಗ್ರಹ)

__________________________________________________________________________

"ನ ಗೃಹಂ ಗೃಹಮುಚ್ಯತೆ ಗೃಹಿಣೀ ಗೃಹಮುಚ್ಯತೆ" 
ಅಂದರೆ, ಗೃಹವನ್ನು ಮಾಡುವುದು ಕಟ್ಟಡವಲ್ಲ, ಅದನ್ನು ಮಾಡುವವಳು ಗೃಹಿಣಿ....

__________________________________________________________________________

Love 2 persons in this world the most, 1. who has given birth to you... 2. who has taken birth just for you...
__________________________________________________________________________

ಹೂವನ್ನು ನೀಡುವ ಕೈಗೂ ಒಂದಿಷ್ಟು ಪರಿಮಳ ಅಂಟಿಕೊಂಡಿರುತ್ತದೆ. 
- ಚೀನೀ ಗಾದೆ
__________________________________________________________________________

’ಯೌವನಕ್ಕೆ ವಿವೇಕ ಇಲ್ಲ, ವೃದ್ಧಾಪ್ಯಕ್ಕೆ ಶಕ್ತಿಯಿಲ್ಲ.’
__________________________________________________________________________