Saturday, July 31, 2010

ಅನ್ನಯ್ಯಾ..........ತಮ್ಮುಡು.........

ನಾನು Join ಆಗಿ 30 ದಿನಗಳೂ ಮುಗಿದಿರಲಿಲ್ಲ, ನಮ್ಮ buildingಅನ್ನು ಬದಲಿಸುವ ವಾರ್ತೆ ನಮ್ಮೆಲ್ಲರ ಕಿವಿಗಳಿಗೆರಗಿ ಎಲ್ಲೋ ಒಂದು ಕಡೆ ಉತ್ಸಾಹ, ಇನ್ನೊಂದು ಕಡೆ ಹಳೆಯ building ನಲ್ಲಿ ಅವಿತಿರಿಸಿದ್ದ ಭಾವನೆಗಳಿಂದ ದೂರಾಗುವ ನೋವು ಒಂದೇ ಸಮಯದಲ್ಲಿ ಮೂಡಿ ಕಾಡುತ್ತಿತ್ತು..., ಮುಂಜಾನೆಯೇ ದೇವರಿಗೆ 4 ಗಂಧದ ಕಡ್ಡಿಗಳನ್ನು ಬೆಳಗಿ ನಮ್ಮ ಮುಂದೆ ಸದಾ ತಮ್ಮ ನಗುಮುಖದಿಂದ ದಿನವನ್ನು ಸವೆಸುತ್ತಿದ್ದ "ಚಂದ್ರು", ತಮ್ಮದೇ ಶೈಲಿಯಲ್ಲಿ ಎಲ್ಲರನ್ನೂ ಅಣಕಿಸಿಕೊಂಡು ತಮ್ಮ Computer ನಲ್ಲಿ ಪದೆ ಪದೆ "ಸಕ್ಕತ್ತಾಗವ್ಳೆ, ಸುಮ್ನೆ ನಗ್ತಾಳೆ" ಹಾಡು play ಮಾಡುತ್ತಾ ಇರುತ್ತಿದ್ದ "ಗೌಡ್ರು". ಮಹಾನ್ ಮೇಧಾವಿ, ಎಲ್ಲಾ ಮಾತಿಗಿನ್ನೊಂದು ಮಾತಾಗಿ ಹರಿದಾಡುತ್ತಿದ್ದ "ಪರಮೇಶ್", ನಮ್ಮನ್ನು ತಮ್ಮ ಮನೆಯವರಂತೆ ನೋಡಿಕೊಳ್ಳುತ್ತಿದ್ದ "ಚೆನ್ನಮ್ಮ"......ಇವರು ಯಾರೂ ನಮ್ಮ ಜೊತೆಗೆ ಪ್ರತಿದಿನ ಕಾಣಿಸುವುದಿಲ್ಲವೆನ್ನುವ ದುಗುಡವೊಂದು ಕಡೆಯಾದರೆ, ನಮ್ಮ company ಇನ್ನೊಬ್ಬರ ಕೈ ಬಿಟ್ಟು ತಾನಾಗಿಯೇ ನಡೆಯುವ ಕಾಲ ಹತ್ತಿರವಾಯಿತೆಂಬ ಸೊಂತೋಷ... ಎರಡೂ ಭಾವನೆಗಳು ಒಟ್ಟಿಗೆ ಸೇರಿ ವಿಚಿತ್ರ ಮಿಶ್ರಣವಾಗಿ ಎಲ್ಲರ ಮುಖದ ಮೇಲೆ ರಾಚುತಿತ್ತು. ಎಲ್ಲರೂ "building ಮಾತ್ರ ಬದಲಾಗ್ತಾ ಇದಿವಿ ಯಾವಗ್ಲೂ ಬರ್ತ ಇರ್ತಿವಿ" ಎಂದು ಒಬ್ಬರನ್ನೊಬ್ಬರು console ಮಾಡಿಕೊಂಡು ತಮ್ಮ ಹೊಸ buildingನ ಹೊಸ interiors ಬಗ್ಗೆ plan ಹಾಕಿಕೊಳ್ಳುವುದೆ ಸಾಮನ್ಯವಾಗಿಬಿಟ್ಟಿತ್ತು..
ಬಂದೇ ಬಂತು ಮೇ 16...

may 16 ಭಾನುವಾರವಾದ್ದರಿಂದ ನಾವುಗಳು ಶುಕ್ರವಾರವೇ ನಮ್ಮ ಕೆಲಸಗಳನ್ನು ಕುದುರೆ ವೇಗದಲ್ಲಿ ಮುಗಿಸಲು ಮುಂದಾಗಿದ್ದೆವು. "ಮಾಂತ್ಯ" ಹಾಗೂ "ಹ್ಯಾಪಿ"ಗೆ ಕಡೆ ಸಮಯದಲ್ಲಿ ಕೆಲಸ assign ಆದದ್ದರಿಂದ ಅದು ಅಂದಿಗೆ ಮುಗಿಯದೆ ನಾಳೆಗೂ ತನ್ನ ಸಮಯವನ್ನು ಚಾಚುವ ಎಲ್ಲ ಮುನ್ಸೂಚನೆಗಳನ್ನು ಕೊಡುತ್ತಿತ್ತು. "ವಸು" ಎಂದಿನಂತೆ ತನ್ನ ಕೆಲಸವನ್ನು ಮುಗಿಸಿ diary ಯಲ್ಲಿ ಗೀಚುವ ಕೆಲಸದಲ್ಲಿದ್ದರು.... ನಾನೂ ಮಾಮೂಲಿನಂತೆ, ನನ್ನ ಬರುವಿಕೆಯನ್ನು ಕಾದು ಕುಳಿತಿರುವ bus ನ ಮನಸ್ಸು ನೋಯಿಸಬಾರದೆಂದು bag ಹೆಗಲಿಗೇರಿ ಹೊರಡಲು ಸಿದ್ದನಾಗುತ್ತಿದ್ದೆ..., ಇದನ್ನೆಲ್ಲೋ ತನ್ನ ತುದಿನೋಟದಲ್ಲಿ ಗಮನಿಸುತ್ತಿದ್ದ ನಮ್ಮ superior... "sandeep, we are working tomorrow, we'll work for an hour or two and later we'll party..." ಅಂದರು... ಇನ್ನೂ ಅವರ ಮಾತುಗಳು ತಲೆಯಲ್ಲಿ "ಜೀರ್ಣ" ವಾಗದಿದ್ದರೂ.. ಎನೋ ಅರ್ಥವಾದವನಂತೆ "sure.., I will come." ಎಂದೆ...., ಪಕ್ಕದಲ್ಲೇ ಇದ್ದ "ಮಾಂತ್ಯ"ನನ್ನು "ನಾನು ಪಾರ್ಟಿಗೆ ಬಂದು ಏನು ಮಾಡ್ಲಿ?" ಎಂದೆ... ಅವ,ಈ ಪ್ರಶ್ನೆಗೆ ಮೊದಲೇ ಸಿದ್ದನಾದವನಂತೆ "ನೀವು ಚಿಪ್ಸ್ ತಿನ್ಕೊಂಡು ಕೂತಿರಿ" ಎಂದು ತನ್ನ 33! ಹಲ್ಲುಗಳನ್ನು ಒಮ್ಮೆ ಪ್ರದರ್ಶಿಸಿದ...


ಶನಿವಾರ ಎಲ್ಲರೂ ಪ್ಯಾಕಿಂಗ್ ನ busy ಯಲ್ಲಿದ್ದರು..., "ಮಂಜು" ತನ್ನ systemಅನ್ನು Divorce ಕೊಟ್ಟ ಹೆಂಡತಿಯಂತೆ ಅದರ ಮುಖವನ್ನೂ ನೋಡಲು ಸಿದ್ಧವಿರದೆ ಅದಕ್ಕೆ ಬೆನ್ನು ಮಾಡಿ ನಿಂತಿದ್ದ, "ವಸು" ತನ್ನ ಹೊಸ system parts ಬೆರೆಯವುಗಳ ಜೊತೆ ಕೂಡಿ ಹೋಗಬಾರದೆಂದು ಅವನ್ನು ಬೇರೆಯಾಗಿ pack ಮಾಡಿ ಜೋಪಾನವಾಗಿ ಬದಿಗಿರಿಸಿದ್ದರು. ನಾನು, ನನ್ನ system ಅನ್ನು box ಗೆ ತುರುಕುತ್ತಿದ್ದ ಪರಮೇಶ ರನ್ನು ಹುರಿದುಂಬಿಸುತ್ತಿದ್ದೆ. "ಮಾಂತ್ಯ","ಹ್ಯಾಪಿ" ಇಬ್ಬರೂ ಅವರ ಹಿಂದಿನ ದಿನದ ಕೆಲಸವನ್ನು ಇನ್ನೂ ಮುಂದುವರೆಸಿದ್ದರು.

ಅಂತೂ ಇಂತೂ ಇನ್ನೆರಡು ತಾಸು ಸರಿದಿತ್ತು... ಎಲ್ಲಮ್ಮನ ಜಾತ್ರೆ ನಮ್ಮನ್ನು ಎದುರು ನೋಡುತ್ತಿತ್ತು....

ಎಲ್ಲರಿಗೂ ಮೊದಲೇ news ತಲುಪಿದ್ದರಿಂದ ಆ ದಿನ company ಯ ಪ್ರತಿಯೊಬ್ಬರೂ hotel ನಲ್ಲಿ ತಮ್ಮ ಹಾಜರಾತಿ ದಾಖಲಿಸಿದ್ದರು. ನಮ್ಮ ಬಳಗದ ಉಪಸ್ತಿತಿಯಲ್ಲಿ ಹೋಟೆಲ್ ಉತ್ಸಾಹದಿಂದ ಬೆಳಗುತ್ತಿತ್ತು... ಎಲ್ಲರೂ ತುಂಬಿದ್ದ hotelನ ಒಂದು ಬದಿಯನ್ನು ನಾನೂ ಹೊಕ್ಕು, ಅಲ್ಲೆ ಮೂಲೆಗೆ ಒರಗಿಕೊಂಡಿದ್ದ ಕುರ್ಚಿಗೆ ನನ್ನ ಹಿಂಬದಿಯನ್ನಾಸರಿಸಿದೆ... "ಠಣ್ ಠಣ್" ಶಬ್ಧ ಮಾಡುತ್ತಾ, ಬುಜಕ್ಕೆ ಬುಜವನ್ನು ತಾಗಿಸುತ್ತಾ ಬಂದ ಬಾಟ್ಲಿಗಳು ನಮ್ಮ ಟೇಬಲ್ ಏರಿ ಕೂತವು... ಹುಡುಗರೂ ಅವುಗಳ "ತೆಲೆ" ಗಳನ್ನೆಗರಿಸಿ ವಿಶಿಷ್ಟ ಶೈಲಿಯಲ್ಲಿ ಗ್ಲಾಸ್ ಗಳಲ್ಲಿ ತುಂಬಿ ನನ್ನ ಮುಂದೆ ಹಿಡಿದರು...., ಇಲ್ಲ.., ನಾನು ಕುಡಿಯಲ್ಲ.. ಎಂದೆ... ಅವರೂ ಈ ಉತ್ತರವನ್ನಪೇಕ್ಷಿಸಿದ್ದಂತೆ ನನ್ನ ಮುಂದೆ ಇಟ್ಟ ಗ್ಲಾಸನ್ನು ತಮ್ಮ ಬದಿಗೆಳೆದು ತಮ್ಮ ತುಟಿಗೊರಗಿಸಿದರು.., ನನೂ ನನಗಾಗಿ ತೇಲಿ ಬಂದ sprite ಅನ್ನು ಹೀರುತ್ತಾ ಕುಳಿತೆ... ಇನ್ನೂ ಎರಡು ನಿಮಿಶದ ಗಡಿ ದಾಟಿರಲಿಲ್ಲ,
"ಅನ್ನಯ್ಯಾ.................................." ಎಂದೊಬ್ಬ ಶುರು ಮಾಡಿದ..... ಇನ್ನೂ ಏನಾಯಿತೆಂದುಕೊಳ್ಳುವಷ್ಟರಲ್ಲಿ ಇನ್ನೊಂದು ಬದಿಯಿಂದ...."ತಮ್ಮುಡು..........................." ಕೂಗು......, ಎಂದೋ ಕಳೆದು ಹೋಗಿ ಹನ್ನೆರಡು ವರ್ಶದ ನಂತರ ಕುಂಭ ಮೇಳದಲ್ಲಿ ಸಿಕ್ಕವರಂತೆ ತಮ್ಮ ಬ್ರಾತ್ರುತ್ವವನ್ನು ಪ್ರದರ್ಶಿಸುತ್ತಿದ್ದರು..,

ಅಷ್ಟರಲ್ಲಿ ನನ್ನ ಎದುರಿಗೆ ಕುಳಿತಿದ್ದವರಿಂದ "ಸಾರಾಯಿ ಜ್ಞಾನ ಬೋಧನೆ" ಶುರುವಾಯಿತು.... "ಇದು ಹೀಗೆ ಕುಡಿದರೆ ಹೀಗಾಗುತ್ತೆ...., ಹಾಗೆ ಕುಡಿದರೆ ಹಾಗಗುತ್ತೆ...." ಎಂದು ತಮ್ಮ ಅರಿವಲ್ಲಿದ್ದ ಎಲ್ಲ ರೀತಿಗಳ ವಿಚಾರ ಧಾರೆಯನ್ನು ಹರಿಸುತ್ತಿದ್ದರು....ನಾನೂ biotech ಇಂದ ಬಂದವನಾದ್ದರಿಂದ ನನ್ನ ಜ್ಞಾನವನ್ನೂ ಅವರ ಜೊತೆ ಬೆರೆಸುತ್ತಿದ್ದೆ..., ಹಾಗೆ ಬರುತ್ತಿದ್ದ..., French fries, ಪಕೋಡ ಗಳ plateಅನ್ನು ಇನ್ನೊಬ್ಬರ table ತಲುಪುವ ಮೊದಲೇ ನನ್ನ ಬದಿಯವ ನಮ್ಮ table ಗೆ ಎಳೆದಿಡುತ್ತಿದ್ದ, ಹೀಗೆ, ಎಲ್ಲಾ table ನ starters ನಮ್ಮ table ಮೆಲೆ ಪ್ರದರ್ಶನಗೊಂಡಿದ್ದವು..... ಬೇರೆ table ನವರು ನಮ್ಮನ್ನು ಗುರಾಯಿಸುತ್ತಿದ್ದದ್ದು ಸಾಮಾನ್ಯವಾಗಿತ್ತು..,

ಇದು ನನ್ನ brand ಅಲ್ಲ, Budweizer, Budweizer,,, ಇದಕ್ಕಿನ್ನೂ ಅದು ಚೆನ್ನಗಿರುತ್ತೆ, smell ಇನ್ನು pleasant ಆಗಿ ಇರುತ್ತೆ ನಿಮಗೆ ತೋರಿಸ್ತೀನಿ ಎಂದವ ಅಲ್ಲೇ ಅಂಗೈಯಗಲದ ಹಾಳೆಯ ಮೇಲೆ ಗೀಚುತ್ತಾ ನಿಂತಿದ್ದ waiter ನ ಕೈಯಲ್ಲಿ ಇನ್ನೊಂದು brand ನ bottle ತರೆಸಿ ಅದನ್ನು ಗ್ಲಾಸಿಗೆ ಸುರಿದು...ನೋಡಿ, ನೋಡಿ..., ಇದರ ವಾಸನೆ ಎಷ್ಟು pleasant ಆಗಿ ಇದೆ ಎಂದು ನನ್ನ ಮೂಗಿಗೆ ಹಿಡಿದ.. ನಾನೂ ನನಗೆ ಎರಡೂ brandಗಳ ವಾಸನೆಯ ಪರಿಚಯವಿದ್ದವನಂತೆ ತಲೆಯಾಡಿಸಿದೆ. ನನಗೆ ಗೊತ್ತಿಲ್ಲ ಎಂದರೆ ಇನ್ನೇನು ಹೇಳುತ್ತಾನೋ ಎನ್ನುವ ಭಯದಲ್ಲಿ...

ತಗೊ...ಶಿವಾ..... budweizer 1..,2...,3.., ನಿಧಾನವಾಗಿ ಹೊಟ್ಟೆ ಹೊಕ್ಕುತ್ತಿತ್ತು.... ಅಷ್ಟರಲ್ಲಿ ಎದುರಿನ ಸಾಲಿನಲ್ಲಿ ಕುಳಿತಿದ್ದ ಇನ್ನೊಬ್ಬ, ತನ್ನ ಪಕ್ಕ ಕುಡಿಯದೇ cigaretteನ ಹೊಗೆ ಹೀರುತ್ತಾ ಕುಳಿತಿದ್ದವನನ್ನು ಕಂಡು... "ಹೇ...., ತಗೊಳ್ರೀ.... ಯಾಕ್ ಹಂಗೇ ಕೂತೀರಿ?" ಎಂದು ಅಶ್ಟಕ್ಕೇ ಸುಮ್ಮನಾಗದೇ, ಆಗಲೇ ತೆಲುಗು ದೇವಿ ಮೈ ಮೇಲೆ ಆಹ್ವಾನಿಸಿದ್ದ ಪರಿಣಾಮವೋ ಎನೋ, "ನುವ್ವು ಮಗಾಡಿವಿ ಐತೆ ತಾಗು..., ತೀಸ್ಕೊ" ಎಂದು ಅವನ ಗಂಡಸುತನವನ್ನು ತೆಲುಗಿನಲ್ಲಿ ಅಲ್ಲಾಡಿಸಿ. glass ಮುಂದಕ್ಕಿಟ್ಟು.., ಇವನ್ನೆಲ್ಲಾ ನೋಡುತ್ತಾ ನಗುತ್ತಿದ್ದ ನನ್ನನ್ನೊಮ್ಮೆ ನೋಡಿ "ರೀ ಬರ್ರಿ ಇಲ್ಲಿ" ಎಂದ.., ನಾನು ಇನ್ನು ಎಲ್ಲಿ ನನ್ನ ಗಂಡಸುತನವನ್ನು ತೆಲುಗಿನಲ್ಲಿ ಅಲ್ಲಾಡಿಸುತ್ತಾನೋ ಎಂದು ಅಡ್ಡಡ್ಡ ತಲೆ ಅಲ್ಲಾಡಿಸಿ ನುಣುಚಿಕೊಂಡೆ.., ನನ್ನ ಮುಂದಿದ್ದವ, "ನಾನು ಇನ್ನೂ L ಬೋರ್ಡು, ಸ್ವಲ್ಪ train ಮಾಡಿ" ಎಂದು ಒಂದೊಂದೇ ಗುಟುಕು ಒಳಗಿಳಿಸತೊಡಗಿದ.

ಅರ್ಧ ಲೋಟದಲ್ಲಿ ಕೈಲಾಸ ಒಂದು ರೌಂಡ್ ಹೊಡೆದು ಬಂದಿದ್ದ ಮತ್ತೊಬ್ಬ ತನ್ನ table ಮೇಲಿನ tissues ಅನ್ನು ಹೂಗಳಂತೆ ಹಾರಿಸುತ್ತಿದ್ದ..., ಒಮ್ಮೆಲೇ ಅವು ಮುಗಿದದ್ದನ್ನು ಗಮನಿಸಿದ ಅವ, ಪಕ್ಕದವರ tableನ tissues ಎಳೆದು ಅವನ್ನೂ ಗಾಳಿಗೆ ಹಾರಿಸುವುದಕ್ಕೆ ಶುರು... ಅವನನ್ನು ನಾನು ನೋಡುತ್ತಿದ್ದುದು ಗಮನಿಸಿ "hey sandy, please don't mind haan!.. matlab samajgaya??"ಎಂದು ತನ್ನ englishನಲ್ಲಿ ಅರೆಬೆಂದ ಹಿಂದಿಯನ್ನು ಬೆರೆಸಿ ಉಸುರುತ್ತಿದ್ದ.....


ಆಗಲೇ party ಶುರುವಾಗಿ 2-3 ಘಂಟೆಗಳಾಗಿತ್ತು.., ನಮ್ಮ Budweizer ವೀರ ತನಗೆ ಏರಿದ ಅಮಲನ್ನಿಳಿಸಲು ವಿವಿಧ ವಿಧಾನಗಳನ್ನಾಶ್ರಯಿಸತೊಡಗಿದ. ಮೊದಲು, ಈರುಳ್ಳಿ, ನಂತರ ನಿಂಬೆ ರಸ, ಹೀಗೆ ತನ್ನ ಕಣ್ಣಿಗೆಟುಕುವ ಎಲ್ಲಾ ಪ್ರಕರಗಳನ್ನು ಉಪಯೋಗಿಸತೊಡಗಿದ. ಅದೆಲ್ಲಿಂದ ಅವನ ತಲೆಗೆ "ರಸಂ" ಕುಡಿದರೆ ಅಮಲಿಳಿಯುತ್ತದೆಂದು ತಿಳಿಯಿತೋ, ಹಿಂದೆ ತಿರುಗಿ waiter ಗೆ "ರಸಂ ಬೇಕು" ಎಂದು ತನ್ನ ಮುಂದೆ ಕೂತಿದ್ದ "L ಬೋರ್ಡ್"ಗೆ ಕುಡಿಯುವುದನ್ನು ಹೇಳಿಕೊಡತೊಡಗಿದ....table ಮೇಲೆ ರಸಂ ಹಾಜರ್. ಆದರೆ ಇವನ lecture ಮಧ್ಯೆ ಅದು ತಣ್ಣಗಾಗಿ ಕುಳಿತಿತು. 2 ನಿಮಿಷದ ನಂತರ ಅದನ್ನು ಗಮನಿಸಿ ಅದರಲ್ಲಿ ಒಂದು ಬೆರಳಿಟ್ಟು ನೋಡಿ ಹಿಂದೆ ತಿರುಗಿ ಮತ್ತೆ "ರಸಂ" ಎಂದ.... ಹೀಗೆ, 6 bowl ರಸಂ ನಮ್ಮ ಟೇಬಲ್ ಸೇರಿ, 7 ನೆಯದಕ್ಕೆ ಆರ್ಡರ್ ಮಾಡಿದ ಇವನ ಪರಿಯನ್ನು ಕಂಡು waiter ತನ್ನ ದಯನೀಯ ಮುಖವನ್ನು ನನ್ನ ಕಡೆ ತಿರುಗಿಸಿದ. ನನ್ನ ಕಣ್ಸನ್ನೆಯನ್ನರಿತು ಒಳಗೆ ಹೋದ ಅವ ಮತ್ತೆ ಬರಲೇ ಇಲ್ಲ...

ಅಂತೂ ಇಂತೂ ಇನ್ನೊಂದು tableಗೆ ಒಂದು ಪ್ಲೇಟ್ French fries ತಲುಪಿತ್ತು, ಇನ್ನು ಈ ನಿಮಿಶವನ್ನು ಬಿಟ್ಟರೆ ಅದು ಮತ್ತೆ ಸಿಗುವುದಿಲ್ಲವೆಂದರಿತ ನಮ್ಮ ಪಕ್ಕದ ಟೆಬಲ್ ನವ ಅದನ್ನೇ ಊಟದಂತೆ ತಿಂದು ಮುಗಿಸಿ ಬೆರಳು ಚೀಪತೊಡಗಿದ್ದ..

ಎಲ್ಲರೂ ತಮ್ಮ ತಮ್ಮ ವಿಚಾರಧಾರೆಗಳನ್ನು ತೇಲಿಬಿಡುತ್ತಿರಲು, ಒಮ್ಮೆಲೇ ಕೇಳಿತು ಅದರೊಂದಿಗೊಂದು ಶಬ್ಧ "ವೈಕ್....................................." ನಮ್ಮ Budweizer ವೀರನ ಹೊಟ್ಟೆಯನ್ನು Bdweizer ತ್ಯಜಿಸಿತ್ತು..., ತಗೋ ಶುರು.., "ವೈಕ್......" "ವೈಕ್......" "ವೈಕ್........" ಇನ್ನು ಮೂರು ಸಾರಿ ಬಾತ್ರೂಮ್ ಆಶ್ರಯಿಸಿದ್ದ ವೀರ....... ಯುದ್ದ ಗೆದ್ದು ಬಂದವನು ಶಪಥ ಮಾಡಿದಂತೆ.. "ಇನ್ನು ಮುಂದೆ ನಾನು ಕುಡಿಯುವುದಿಲ್ಲ" ಎಂದು ನಮ್ಮೆಲ್ಲರ ಮುಂದೆ ಒಂದು dialogue ಅನ್ನು 6 ಸಾರಿ ಹೇಳಿ ಹೋಟೆಲ್ನಿಂದ ಹೊರನಡೆದ...ನಾವುಗಳೂ "All is well that ends well" ಎಂದು ನಮ್ಮ ಗಡಿಯಾರಗಳನ್ನು ನೋಡಿಕೊಳ್ಳಲು ಮುಂದಾದೆವು...

ವಿ.ಸೂ.... ನಮ್ಮ Budweizer ವೀರ ಈಗ ಮಾತು ಮುರಿದು ತಮ್ಮ "ಸೌಂದರ್ಯ ವರ್ಧನೆಗಾಗಿ!!!!!!!!!!!!!" ಇನ್ನೊಂದು Brand ಅನ್ನು ಆಶ್ರಯಿಸುವ ಹಂತದಲ್ಲಿದ್ದಾರೆ..


ಇಲ್ಲಿಗೆ ಈ ವಿವರಣೆ ಮುಗಿಸೋಣ........ ನಾಳೆ ಇದನ್ನು ಓದಿದ ಇವರು ನನ್ನನ್ನು ಉಳಿಸಿದ್ದರೆ, ಮತ್ತೆ ನಿಮ್ಮ ಮುಂದೆ ಇನ್ನೊಂದು ಸಂಗತಿಯೊಂದಗೆ ಬರುತ್ತೇನೆ..... ಅಲ್ಲಿಯವರೆಗೂ......ನಗುತ್ತಿರಿ..... ನಿಮ್ಮ ನಗು ನಮಗೆ ಅಮೂಲ್ಯ...

1 comment:

  1. hehehehe... budweizer ginta becks chennagirutte anta yoli,,,, but sigodhu doubtu :)

    ReplyDelete