Sunday, July 25, 2010

ಬಾಲ್ಯ

ಬಾಲ್ಯ ಎಷ್ಟು ಸುಂದರ ಎಂದು, ನಮಗೆಲ್ಲರಿಗೂ ತಿಳಿದ ಮತ್ತು ಅನುಭವಿಸಿದ ಸಂಗತಿ. ಬಾಲ್ಯದಲ್ಲಿ ನಾವು ಏನೆಲ್ಲಾ ಕೀಟಲೆ, ತರಲೆ ಮಾಡಿದ್ದೆವು ಮತ್ತು ಹೇಗೆಲ್ಲಾ ಇದ್ದೆವು ಎಂಬುದನ್ನು ನಮ್ಮ ಅಮ್ಮ ಅಥವಾ ಹಿರಿಯರು ನಮಗೆ ಹೇಳಿದಾಗ ನೋ ಒಂದು ಸುಂದರ ಅನುಭವ. ಎಕೆಂದರೆ ಆಗೆಲ್ಲಾ ನಮಗೆ ಅಷ್ಟಾಗಿ ತಿಳುವಳಿಕೆ, ಭಾವ-ಭಾವನೆ ಗೊತ್ತಿಲ್ಲದ ಕಾರಣ ನಮ್ಮ ತಂಟೆ-ತಕರಾರುಗಳು ನಮಗಿಂತ ನಮ್ಮ ಹೆತ್ತವರು ಅನುಭವಿಸಿ ಅದರ ಸುಂದರ ಕ್ಷಣಗಳನ್ನು ಸವಿದಿರುತ್ತಾರೆ. ಚಿಕ್ಕ ಮಕ್ಕಳು ಅದೇನೇ ಮಾಡಿದರು ಅದು ಚೆನ್ನಾಗಿಯೇ ಕಾಣುತ್ತದೆ, ಅದಕ್ಕೆ ೨ ಕಾರಣಗಳು, ಒಂದು ಮಕ್ಕಳಲ್ಲಿನ ಆ ಮುಗ್ದತೆ, ಮತ್ತು ಎರಡನೆಯದಾಗಿ ಅವರ ಬಗ್ಗೆ ನಮಗೆ ಇರುವ ನಿಷ್ಕಲ್ಮಶ ಭಾವ.

ನಾನು ಏನನ್ನು ಹೇಳಲು ಹೊಟಿರುವೆನೆಂದರೆ, ಹೇಗೆ ಬಾಲ್ಯ ನಮ್ಮ ಬೇರೆಯವರಿಗೆ ಸಂತೋಷವನ್ನು ಕೊಡುತ್ತಿತ್ತೋ, ಅಂತಹ ಅನುಭವವನ್ನು ನಾನು ಈಗ ನನ್ನ ತಂಗಿಯ ಮಗನ (ಕಥಾನಾಯಕ "ಪುಟ್ಟ" ನ) ಆಟಾಟೋಪವು ನನ()ಗೆ ಸಂತೋಷವನ್ನು ಕೆಲವೊಂದು ಬಾರಿ ಮುಜುಗರವನ್ನು ತರುತ್ತಿದೆ.

ಈ ಕಥಾನಾಯಕನ ಕಿರು ಪರಿಚಯ, ತಂದೆ, ದೊಡ್ಡ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಎಂಜಿನಿಯರ್, ತಾಯಿ ಪದವೀಧರೆ, ಸದ್ಯ ಮನೆಯಲ್ಲಿಯೇ ಕಥಾನಾಯಕನ ಸೇವೆಯ (ಕಥಾನಾಯಕನ) ಭಾಗ್ಯ. ಅಜ್ಜ-ಅಜ್ಜಿ ಅವರ ಊರಾದ ಶಿರಸಿಯಲ್ಲಿ ಮತ್ತು ಕಥಾನಾಯಕನ ಮೊತ್ತೊಬ್ಬ ಅಜ್ಜಿ ಮತ್ತು ಮಾವ (ಅಂದರೆ ನಾನು ಕಥಾನಾಯಕನ ಮುದ್ದಿನ ತೊದಲು ನುಡಿಯ "ವಸ್ ಧೇಶ್ ಮಾಮ..") ಇದೇ ಊರಲ್ಲಿ (ಅಂದರೆ ಬೆಂಗಳೂರಿನಲ್ಲಿ).

ಇವನಾದರು ಬಹಳ ಆತುರಗಾರ, ತಾಯಿಯ (ಬಸಿರಿನ) ವೇದನೆಯನ್ನು ನೋಡಿ ತಡೆಯಲಾರದೆಯೋ ಅಥವಾ ನಮ್ಮನೆಲ್ಲಾ ನೋಡುವ ಆತುರವೋ ತಿಳಿಯದು, ತಾಯಿಯ ಗರ್ಭದಲ್ಲಿ ಹಾಯಾಗಿ ಮಲಗಿಕೊಂಡಿರಬೇಕಾದವನು ಒಂದು ತಿಂಗಳ ಮುಂಚೆಯೇ ಭೂಮಿಗೆ ಬಂದ "ಭೂಪ". ವಿಶೇಷ ಮತ್ತು ವಿಪರ್ಯಾಸವೇನೆಂದರೆ, ಅವನು ತಾಯಿಯನ್ನು ನೋಡಿದುದು ೨ ದಿನಗಳ ನಂತರ. ಅವನ ಅಮ್ಮ ತೀವ್ರನಿಗಾ ಘಟಕದಲ್ಲಿ, ಮತ್ತು ಇವನು ಇತ್ತ ಅಜ್ಜ-ಅಜ್ಜಿ, ತಂದೆಯೊಂದಿಗೆ ಹಿಂದಿನ ಜನ್ಮದ ರಹಸ್ಯದ ಹರಟೆಯಲ್ಲಿ. ಎರೆಹುಳದಂತೆ ಇದ್ದ ಇವನನ್ನು ಈಗ ನೋಡಿದರೆ ಹೀಗಿದ್ದನೇ ಎಂಬ ಸಂಶಯ, ಮತ್ತು ಅಬ್ಬಾ ಎಂಬ ನಿಟ್ಟುಸಿರು.

ಅವನ (ಎಲ್ಲರಂತೆ) ಬಾಲ್ಯಲೀಲೆಗಳು ಹಲವು, ಇಷ್ಟೆಲ್ಲಾ ವೇಗವಾಗಿ ಭೂಮಿಗೆ ಬಂದರು. ಉಳಿದಂತೆ ಎಲ್ಲರಿಗಿಂತಲೂ ನಿಧಾನ. ಅವನ ಬಾಲ್ಯದ ದಿನಗಳಲ್ಲಿ, ಅವನು ಅಂಬೆಗಾಲನ್ನು ಇಟ್ಟಿದ್ದೇ ನಾವು ನೋಡಲಿಲ್ಲ ಮೊದಲಾಗಿ ನಿಲ್ಲಲು ಪ್ರಾರಂಭಿಸಿದ. ಹೇಳುತ್ತಾ, ಬರೆಯುತ್ತಾ ಹೋದರೆ, ಒಂದು ದೊಡ್ಡ ಗ್ರಂಥವನ್ನೇ ಬರೆಯಬಹುದು. ಅವನ ಕೆಲವು ಬಾಲ್ಯದ ಪುಂಡಾಟಿಕೆಗಳನ್ನು ಹೇಳಲು ನನಗೂ ತವಕ ನಿಮಗೆ ಕೇಳಲೂ ಎಂದು ನನ್ನ ಅನಿಸಿಕೆ.

ತೀರ ಇತ್ತೀಚಿನ ಒಂದು ಘಟನೆ, ಅವನು ಈಗ ಶಾಲೆ(ಮಾಂಟೆಸರಿ)ಗೆ ಹೋಗಲು ಪ್ರಾರಂಭಿಸಿದ್ದಾನೆ, ಕನಸು ಎಂದರೆ ಏನೆಂಬುದನ್ನೇ ತಿಳಿಯದ ಈ ಎಳೆ ವಯಸ್ಸಿನ, ಬೆಳಗಿನ ಸುಂದರ ನಿದ್ರೆಯನ್ನು ತಂದೆ-ತಾಯಿಯ ಬೆಚ್ಚನೆಯ ಅಪ್ಪುಗೆಯಲ್ಲಿ ಬೆಳಗಿನ ಜಾವದ ಸುಂದರ ನಿದ್ರೆಯನ್ನು ಸವಿಯುತ್ತಿರುವ ೩ ಈ ಪೋರ, ಎಲ್ಲರಂತೆ ಶಾಲೆಗೆ ಹೋಗಲು ಬೇಡವೆಂಬ ಹಠವೋ ಅಥವ ಅಮ್ಮನನ್ನು ಬಿಟ್ಟಿರಲು, ಅಥವಾ ಪೋರನನ್ನು ಬಿಟ್ಟಿರಲು ಅಮ್ಮನಿಗೆ ಒಂಥರಾ ಸುಂದರ ಸಂಕಟ, ಆದರೂ ಅವನ ಅಮ್ಮನಿಗೆ ಸಂಭ್ರಮವೋ ಸಂಭ್ರಮ, ಆದರೆ ಕಥಾನಾಯಕನ ತಂದೆಗೆ ಅವನನ್ನು ಇಷ್ಟು ಬೇಗ ಶಾಲೆಗೆ ಕಳಿಹಿಸುವದು ಇಷ್ಟವಿಲ್ಲ. ಅವನು ಶಾಲೆಗೆ ಹೋಗಲು ಶುರುವಿಟ್ಟ ಕೆಲವು ದಿನಗಳ ನಂತರ, ಒಂದು ದಿನ ತಂದೆಯ ಕಷ್ಟವನ್ನು ಅರಿತವನಂತೆ, ತನ್ನ ತೊದಲು ನುಡಿಯಿಂದ "ಆಯೀ ಪದೇ ಪದೇ ಈ ಹೊಟ್ಟೆ ನೋವು ಯಾಕೆ ಬರತ್ತೇ?" ಎಂದು ಕೇಳಿ ಶಾಲೆ ತಪ್ಪಿಸಲು ಪ್ರಯತ್ನಿಸುತ್ತಿದ್ದ. ಶಾಲೆಯಿಂದ ತಿರುಗಿ ಬರುವ ಸಮಯವಾದ ನಂತರ ಹೊಟ್ಟೆ ನೋವು ವಾಸಿ. ಅದನ್ನು ಅರಿತ ಪಿತಾಮಹ ಒಂದು ಸಲ ಕಥಾನಾಕನು , ತನ್ನ ಎಂದಿನ ತನ್ನ ಮುಗ್ದ ಬಾಣವನ್ನು ಹೂಡಲು, ಹಾಗಾದರೆ ನಿನಗೆ ಇವತ್ತು ಐಸ್ ಕ್ರೀಂ, ಮಸಾಲೆದೋಸೆ ಇಲ್ಲಾ ಎಂದು ಅಣುಕಿಸಲು, ಕೂಡಲೇ ಹೊಟ್ಟೆನೋವು ವಾಸಿಯಾಗಿ, ಶಾಲೆಗೆ ಹೋಗಲು ಅಣಿಯಾದ. ಇಂತಹ ಸಣ್ಣ ಸಣ್ಣ ವಿಷಯಗಳನ್ನು ಅನುಭವಿಸಿಯೇ ತೀರಬೇಕು.

ಹೀಗಿರಲು, ಒಂದು ದಿನ ಎಲ್ಲರಂತೆ, ಅವನ ಅಮ್ಮನಿಗೂ, ಅವನ ಕಲಿಕೆಯ ಬಗ್ಗೆ ತಿಳಿದುಕೊಳ್ಳುವ ತವಕ ಆಸೆ, "ಪುಟ್ಟ ಶಾಲೆಯಲ್ಲಿ ಹೇಳಿಕೊಟ್ಟ ರೈಮ್ಸ್ ಹೇಳು" ಎಂದು ಕೇಳಲು, ಅವನ ತುಂಟತನದ ಮುಗ್ದತನದ ಭಾರಿ ಉತ್ತರ "ಆಯೀ, ನನಗೆ ಇನ್ನೂ ಬುದ್ಧಿ ಬಂದಿಲ್ಲಾ, ಬುದ್ಧಿ ಬಂದ್ ಮೇಲೆ ಹೇಳ್ತಿನಿ". ಎಷ್ಟಾದರು ತಾಯಿ ಹೃದಯ "ಹೂಂ" ಅಂದು ಸುಮ್ಮನಾದಳು. ಕೆಲಸಮಯದ ನಂತರ ಅವನ ಆಟಸ ಸರಂಜಾಮು ಕೆಳಗೆ ಬೀಳಲು, ತನ್ನ ತೊದಲು ನುಡಿಯಿಂದ ಅದನ್ನು ಎತ್ತಿಕೊಡು ಕೋರಿಕೆ, ಇದೇ ಸರಿಯಾದ ಸಮಯ ಎಂದು ತಿಳಿದ ಮಾತೃಶ್ರೀಯು "ನನಗೂ ಬುದ್ಧಿ ಇಲ್ಲ ಪುಟ್ಟ, ಬುದ್ಧಿ ಬಂದ್ ಮೇಲೆ ತೆಕ್ಕೋಡ್ತಿನಿ" ಎಂದಳು. ಅದೇನೋ ಹೊಳೆದಂತೆ, ಜ್ಞಾನೋದವಾದಂತೆ ಚಂಗನೆ ಕುಳಿತಲ್ಲಿಂದ ಹಾರಿ, "ಆಯೀ ನನಗೆ ಬುದ್ಧಿ ಬಂತು ನಾನೇ ತಕ್ಕೋಳ್ತಿನಿ" ಎಂದು ಮುಗ್ದತೆಯ ನಡುವೆ ವೇದಾಂತಿಯಂತೆ ಹೇಳಿ ಅವನಮ್ಮನನ್ನು ಮೋಸಮಾಡಿ ನಗಿಸಿದ. ಈಗಿನ ಮಕ್ಕಳ ಚುರುಕುತನ, ಬಾಲ್ಯದಲ್ಲಿ ದೊಡ್ಡತನ, ಅದರ ನಡುವೆ ಇಂತಹ ಸುಂದರ ಅನುಭವ, ತಂದೆ-ತಾಯಿಗಳಿಗೆ ಗೋಳು, ಆದರೆ ಅದರಲ್ಲಿಯೂ ಒಂದು ತರಹದ ಸುಂದರ ಅನುಭವ.

ಈಗ ಇಷ್ಟು ಸಾಕು, ಇದನ್ನು ಓದಿ ನಿಮಗೂ ನಿಮ್ಮ, ನಿಮ್ಮ ಮಕ್ಕಳ ಬಾಲ್ಯದ ನೆನಪು ಬಂದು ಖುಷಿಯಾಗಿರುವಿರೆಂದು ಭಾವಿಸಿ. ಇನ್ನೂ ರಸವತ್ತಾದ ಕೆಲವು ಘಟನೆಗಳನ್ನು ಮುಂದಿನ ಸಂಚಿಕೆಯಲ್ಲಿ ಬರೆಯುವೆ.

ಧನ್ಯವಾದಗಳೊಂದಿಗೆ.

2 comments:

  1. ವಸು ಲೇಖನ ಚೆನ್ನಾಗಿದೆ.
    ನಿನ್ನ ಅಳಿಯನ ಮುದ್ದು ಮುಖ ನೋಡುವಾಗ ನನಗೂ ನನ್ನ ಮಗಳ ನೆನಪಾಗಿ ಅವಳ ಬಾಲ್ಯ ಮರುಕಳಿಸ ಬಾರದೆ ಅನಿಸಿತು ..ಮಕ್ಕಳ ನಗು, ಮುಗ್ಧತೆ ಮತ್ತು ನಿಷ್ಕಲ್ಮಶ ಮನಸ್ಸಿಗೆ ಮನ ಸೋಲದವರೇ ಇಲ್ಲ ಆಲ್ವಾ !!

    ReplyDelete
  2. ಧನ್ಯವಾದಗಳು, ನಿಮ್ಮ ಅನಿಸಿಕೆಯನ್ನು ಓದಿದ ಬಳಿಕೆ ನನ್ನಲ್ಲಿ ಸಾರ್ಥಕ ಭಾವ... ಇನ್ನೂ ಬರೆಯುವ ಆಸೆ ಹೆಚ್ಹಿದೆ...

    ReplyDelete