Sunday, July 25, 2010

ಬಾಲ್ಯ

ಬಾಲ್ಯ ಎಷ್ಟು ಸುಂದರ ಎಂದು, ನಮಗೆಲ್ಲರಿಗೂ ತಿಳಿದ ಮತ್ತು ಅನುಭವಿಸಿದ ಸಂಗತಿ. ಬಾಲ್ಯದಲ್ಲಿ ನಾವು ಏನೆಲ್ಲಾ ಕೀಟಲೆ, ತರಲೆ ಮಾಡಿದ್ದೆವು ಮತ್ತು ಹೇಗೆಲ್ಲಾ ಇದ್ದೆವು ಎಂಬುದನ್ನು ನಮ್ಮ ಅಮ್ಮ ಅಥವಾ ಹಿರಿಯರು ನಮಗೆ ಹೇಳಿದಾಗ ಏನೋ ಒಂದು ಸುಂದರ ಅನುಭವ. ಎಕೆಂದರೆ ಆಗೆಲ್ಲಾ ನಮಗೆ ಅಷ್ಟಾಗಿ ತಿಳುವಳಿಕೆ, ಭಾವ-ಭಾವನೆ ಗೊತ್ತಿಲ್ಲದ ಕಾರಣ ನಮ್ಮ ತಂಟೆ-ತಕರಾರುಗಳು ನಮಗಿಂತ ನಮ್ಮ ಹೆತ್ತವರು ಅನುಭವಿಸಿ ಅದರ ಸುಂದರ ಕ್ಷಣಗಳನ್ನು ಸವಿದಿರುತ್ತಾರೆ. ಚಿಕ್ಕ ಮಕ್ಕಳು ಅದೇನೇ ಮಾಡಿದರು ಅದು ಚೆನ್ನಾಗಿಯೇ ಕಾಣುತ್ತದೆ, ಅದಕ್ಕೆ ೨ ಕಾರಣಗಳು, ಒಂದು ಮಕ್ಕಳಲ್ಲಿನ ಆ ಮುಗ್ದತೆ, ಮತ್ತು ಎರಡನೆಯದಾಗಿ ಅವರ ಬಗ್ಗೆ ನಮಗೆ ಇರುವ ನಿಷ್ಕಲ್ಮಶ ಭಾವ.

ನಾನು ಏನನ್ನು ಹೇಳಲು ಹೊರಟಿರುವೆನೆಂದರೆ, ಹೇಗೆ ಬಾಲ್ಯ ನಮ್ಮ ಬೇರೆಯವರಿಗೆ ಸಂತೋಷವನ್ನು ಕೊಡುತ್ತಿತ್ತೋ, ಅಂತಹ ಅನುಭವವನ್ನು ನಾನು ಈಗ ನನ್ನ ತಂಗಿಯ ಮಗನ (ಕಥಾನಾಯಕ "ಪುಟ್ಟ" ನ) ಆಟಾಟೋಪವು ನನ(ಮ)ಗೆ ಸಂತೋಷವನ್ನು ಕೆಲವೊಂದು ಬಾರಿ ಮುಜುಗರವನ್ನು ತರುತ್ತಿದೆ.

ಈ ಕಥಾನಾಯಕನ ಕಿರು ಪರಿಚಯ, ತಂದೆ, ದೊಡ್ಡ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಎಂಜಿನಿಯರ್, ತಾಯಿ ಪದವೀಧರೆ, ಸದ್ಯ ಮನೆಯಲ್ಲಿಯೇ ಕಥಾನಾಯಕನ ಸೇವೆಯ (ಕಥಾನಾಯಕನ) ಭಾಗ್ಯ. ಅಜ್ಜ-ಅಜ್ಜಿ ಅವರ ಊರಾದ ಶಿರಸಿಯಲ್ಲಿ ಮತ್ತು ಕಥಾನಾಯಕನ ಮೊತ್ತೊಬ್ಬ ಅಜ್ಜಿ ಮತ್ತು ಮಾವ (ಅಂದರೆ ನಾನು ಕಥಾನಾಯಕನ ಮುದ್ದಿನ ತೊದಲು ನುಡಿಯ "ವಸ್ ಧೇಶ್ ಮಾಮ..") ಇದೇ ಊರಲ್ಲಿ (ಅಂದರೆ ಬೆಂಗಳೂರಿನಲ್ಲಿ).

ಇವನಾದರು ಬಹಳ ಆತುರಗಾರ, ತಾಯಿಯ (ಬಸಿರಿನ) ವೇದನೆಯನ್ನು ನೋಡಿ ತಡೆಯಲಾರದೆಯೋ ಅಥವಾ ನಮ್ಮನೆಲ್ಲಾ ನೋಡುವ ಆತುರವೋ ತಿಳಿಯದು, ತಾಯಿಯ ಗರ್ಭದಲ್ಲಿ ಹಾಯಾಗಿ ಮಲಗಿಕೊಂಡಿರಬೇಕಾದವನು ಒಂದು ತಿಂಗಳ ಮುಂಚೆಯೇ ಭೂಮಿಗೆ ಬಂದ "ಭೂಪ". ವಿಶೇಷ ಮತ್ತು ವಿಪರ್ಯಾಸವೇನೆಂದರೆ, ಅವನು ತಾಯಿಯನ್ನು ನೋಡಿದುದು ೨ ದಿನಗಳ ನಂತರ. ಅವನ ಅಮ್ಮ ತೀವ್ರನಿಗಾ ಘಟಕದಲ್ಲಿ, ಮತ್ತು ಇವನು ಇತ್ತ ಅಜ್ಜ-ಅಜ್ಜಿ, ತಂದೆಯೊಂದಿಗೆ ಹಿಂದಿನ ಜನ್ಮದ ರಹಸ್ಯದ ಹರಟೆಯಲ್ಲಿ. ಎರೆಹುಳದಂತೆ ಇದ್ದ ಇವನನ್ನು ಈಗ ನೋಡಿದರೆ ಹೀಗಿದ್ದನೇ ಎಂಬ ಸಂಶಯ, ಮತ್ತು ಅಬ್ಬಾ ಎಂಬ ನಿಟ್ಟುಸಿರು.

ಅವನ (ಎಲ್ಲರಂತೆ) ಬಾಲ್ಯಲೀಲೆಗಳು ಹಲವು, ಇಷ್ಟೆಲ್ಲಾ ವೇಗವಾಗಿ ಭೂಮಿಗೆ ಬಂದರು. ಉಳಿದಂತೆ ಎಲ್ಲರಿಗಿಂತಲೂ ನಿಧಾನ. ಅವನ ಬಾಲ್ಯದ ದಿನಗಳಲ್ಲಿ, ಅವನು ಅಂಬೆಗಾಲನ್ನು ಇಟ್ಟಿದ್ದೇ ನಾವು ನೋಡಲಿಲ್ಲ ಮೊದಲಾಗಿ ನಿಲ್ಲಲು ಪ್ರಾರಂಭಿಸಿದ. ಹೇಳುತ್ತಾ, ಬರೆಯುತ್ತಾ ಹೋದರೆ, ಒಂದು ದೊಡ್ಡ ಗ್ರಂಥವನ್ನೇ ಬರೆಯಬಹುದು. ಅವನ ಕೆಲವು ಬಾಲ್ಯದ ಪುಂಡಾಟಿಕೆಗಳನ್ನು ಹೇಳಲು ನನಗೂ ತವಕ ನಿಮಗೆ ಕೇಳಲೂ ಎಂದು ನನ್ನ ಅನಿಸಿಕೆ.

ತೀರ ಇತ್ತೀಚಿನ ಒಂದು ಘಟನೆ, ಅವನು ಈಗ ಶಾಲೆ(ಮಾಂಟೆಸರಿ)ಗೆ ಹೋಗಲು ಪ್ರಾರಂಭಿಸಿದ್ದಾನೆ, ಕನಸು ಎಂದರೆ ಏನೆಂಬುದನ್ನೇ ತಿಳಿಯದ ಈ ಎಳೆ ವಯಸ್ಸಿನ, ಬೆಳಗಿನ ಸುಂದರ ನಿದ್ರೆಯನ್ನು ತಂದೆ-ತಾಯಿಯ ಬೆಚ್ಚನೆಯ ಅಪ್ಪುಗೆಯಲ್ಲಿ ಬೆಳಗಿನ ಜಾವದ ಸುಂದರ ನಿದ್ರೆಯನ್ನು ಸವಿಯುತ್ತಿರುವ ೩ ಈ ಪೋರ, ಎಲ್ಲರಂತೆ ಶಾಲೆಗೆ ಹೋಗಲು ಬೇಡವೆಂಬ ಹಠವೋ ಅಥವ ಅಮ್ಮನನ್ನು ಬಿಟ್ಟಿರಲು, ಅಥವಾ ಪೋರನನ್ನು ಬಿಟ್ಟಿರಲು ಅಮ್ಮನಿಗೆ ಒಂಥರಾ ಸುಂದರ ಸಂಕಟ, ಆದರೂ ಅವನ ಅಮ್ಮನಿಗೆ ಸಂಭ್ರಮವೋ ಸಂಭ್ರಮ, ಆದರೆ ಕಥಾನಾಯಕನ ತಂದೆಗೆ ಅವನನ್ನು ಇಷ್ಟು ಬೇಗ ಶಾಲೆಗೆ ಕಳಿಹಿಸುವದು ಇಷ್ಟವಿಲ್ಲ. ಅವನು ಶಾಲೆಗೆ ಹೋಗಲು ಶುರುವಿಟ್ಟ ಕೆಲವು ದಿನಗಳ ನಂತರ, ಒಂದು ದಿನ ತಂದೆಯ ಕಷ್ಟವನ್ನು ಅರಿತವನಂತೆ, ತನ್ನ ತೊದಲು ನುಡಿಯಿಂದ "ಆಯೀ ಪದೇ ಪದೇ ಈ ಹೊಟ್ಟೆ ನೋವು ಯಾಕೆ ಬರತ್ತೇ?" ಎಂದು ಕೇಳಿ ಶಾಲೆ ತಪ್ಪಿಸಲು ಪ್ರಯತ್ನಿಸುತ್ತಿದ್ದ. ಶಾಲೆಯಿಂದ ತಿರುಗಿ ಬರುವ ಸಮಯವಾದ ನಂತರ ಹೊಟ್ಟೆ ನೋವು ವಾಸಿ. ಅದನ್ನು ಅರಿತ ಪಿತಾಮಹ ಒಂದು ಸಲ ಕಥಾನಾಯಕನು , ತನ್ನ ಎಂದಿನ ತನ್ನ ಮುಗ್ದ ಬಾಣವನ್ನು ಹೂಡಲು, ಹಾಗಾದರೆ ನಿನಗೆ ಇವತ್ತು ಐಸ್ ಕ್ರೀಂ, ಮಸಾಲೆದೋಸೆ ಇಲ್ಲಾ ಎಂದು ಅಣುಕಿಸಲು, ಕೂಡಲೇ ಹೊಟ್ಟೆನೋವು ವಾಸಿಯಾಗಿ, ಶಾಲೆಗೆ ಹೋಗಲು ಅಣಿಯಾದ. ಇಂತಹ ಸಣ್ಣ ಸಣ್ಣ ವಿಷಯಗಳನ್ನು ಅನುಭವಿಸಿಯೇ ತೀರಬೇಕು.

ಹೀಗಿರಲು, ಒಂದು ದಿನ ಎಲ್ಲರಂತೆ, ಅವನ ಅಮ್ಮನಿಗೂ, ಅವನ ಕಲಿಕೆಯ ಬಗ್ಗೆ ತಿಳಿದುಕೊಳ್ಳುವ ತವಕ ಆಸೆ, "ಪುಟ್ಟ ಶಾಲೆಯಲ್ಲಿ ಹೇಳಿಕೊಟ್ಟ ರೈಮ್ಸ್ ಹೇಳು" ಎಂದು ಕೇಳಲು, ಅವನ ತುಂಟತನದ ಮುಗ್ದತನದ ಭಾರಿ ಉತ್ತರ "ಆಯೀ, ನನಗೆ ಇನ್ನೂ ಬುದ್ಧಿ ಬಂದಿಲ್ಲಾ, ಬುದ್ಧಿ ಬಂದ್ ಮೇಲೆ ಹೇಳ್ತಿನಿ". ಎಷ್ಟಾದರು ತಾಯಿ ಹೃದಯ "ಹೂಂ" ಅಂದು ಸುಮ್ಮನಾದಳು. ಕೆಲಸಮಯದ ನಂತರ ಅವನ ಆಟಸ ಸರಂಜಾಮು ಕೆಳಗೆ ಬೀಳಲು, ತನ್ನ ತೊದಲು ನುಡಿಯಿಂದ ಅದನ್ನು ಎತ್ತಿಕೊಡು ಕೋರಿಕೆ, ಇದೇ ಸರಿಯಾದ ಸಮಯ ಎಂದು ತಿಳಿದ ಮಾತೃಶ್ರೀಯು "ನನಗೂ ಬುದ್ಧಿ ಇಲ್ಲ ಪುಟ್ಟ, ಬುದ್ಧಿ ಬಂದ್ ಮೇಲೆ ತೆಕ್ಕೋಡ್ತಿನಿ" ಎಂದಳು. ಅದೇನೋ ಹೊಳೆದಂತೆ, ಜ್ಞಾನೋದವಾದಂತೆ ಚಂಗನೆ ಕುಳಿತಲ್ಲಿಂದ ಹಾರಿ, "ಆಯೀ ನನಗೆ ಬುದ್ಧಿ ಬಂತು ನಾನೇ ತಕ್ಕೋಳ್ತಿನಿ" ಎಂದು ಮುಗ್ದತೆಯ ನಡುವೆ ವೇದಾಂತಿಯಂತೆ ಹೇಳಿ ಅವನಮ್ಮನನ್ನು ಮೋಸಮಾಡಿ ನಗಿಸಿದ. ಈಗಿನ ಮಕ್ಕಳ ಚುರುಕುತನ, ಬಾಲ್ಯದಲ್ಲಿ ದೊಡ್ಡತನ, ಅದರ ನಡುವೆ ಇಂತಹ ಸುಂದರ ಅನುಭವ, ತಂದೆ-ತಾಯಿಗಳಿಗೆ ಗೋಳು, ಆದರೆ ಅದರಲ್ಲಿಯೂ ಒಂದು ತರಹದ ಸುಂದರ ಅನುಭವ.

ಈಗ ಇಷ್ಟು ಸಾಕು, ಇದನ್ನು ಓದಿ ನಿಮಗೂ ನಿಮ್ಮ, ನಿಮ್ಮ ಮಕ್ಕಳ ಬಾಲ್ಯದ ನೆನಪು ಬಂದು ಖುಷಿಯಾಗಿರುವಿರೆಂದು ಭಾವಿಸಿ. ಇನ್ನೂ ರಸವತ್ತಾದ ಕೆಲವು ಘಟನೆಗಳನ್ನು ಮುಂದಿನ ಸಂಚಿಕೆಯಲ್ಲಿ ಬರೆಯುವೆ.

ಧನ್ಯವಾದಗಳೊಂದಿಗೆ.

Wednesday, July 21, 2010

ಮೂರು ಸುಂದರ ಕತೆಗಳು

೧. ಒಂದು ಸಲ, ಎಲ್ಲಾ ಹಳ್ಳಿಗರು ಮಳೆಗಾಗಿ ಪ್ರಾರ್ಥಿಸಲು ಮುಂದಾದರು, ಆ ದಿನದಂದು ಎಲ್ಲಾ ಹಳ್ಳಿಯವರು ಪ್ರಾರ್ಥಿಸಲುಒಂದು ಗೂಡಿದರು, ಆದರೆ ಒಬ್ಬ ಹುಡುಗ ಮಾತ್ರ ಛತ್ರಿಸಮೇತ ಬಂದಿದ್ದನು.

"ಅದೇ ಆತ್ಮವಿಶ್ವಾಸ"


೨. ಒಂದು ವರ್ಷದ ಮಗುವಿನ ಭಾವನೆಯ ಒಂದು ಉದಾಹರಣೆ. ನೀವು ಮಗುವನ್ನು ಗಾಳಿಯಲ್ಲಿ ಎಸೆದರೂ, ಅದು ನಗುತ್ತಲೇ ಇರುತ್ತದೆ, ಏಕೆಂದರೆ ಅದಕ್ಕೆ ತಿಳಿದಿದೆ ನೀವು ಹಿಡಿಯುವಿರೆಂದು.

"ಅದೇ ನಂಬಿಕೆ"


೩. ಪ್ರತೀ ರಾತ್ರಿ ನಾವು ಮಲಗಲು ಹೋಗುವಾಗ, ನಮಗೆ ತಿಳಿದಿರುವುದಿಲ್ಲ ನಾವು ನಾಳೆ ಬದುಕಿರುತ್ತೇವೆಯೋ ಇಲ್ಲವೋ ಎಂದು, ಆದರೂ ನಾವು ನಾಳೆಗಾಗಿ ಮುಂದಾಲೋಚಿಸುತ್ತೇವೆ.

"ಅದೇ ವಿಶ್ವಾಸ"

Saturday, July 17, 2010

ಆನಂದ್....ಆ....ಮಹಂತೇಶ್.... ಮ

"ಏನ್ಲೇ.... ಏನೋ ಭಾರಿ ಬರೆದಿದ್ದೀಯ.... ತುಂಬಾ ದಿನ ಆದ ಮೇಲೆ ನೀನು ಬರೆದದ್ದು ಓದಿದೆ, ಬ್ಲಾಗ್ ಗೀಗ್ ಬರಿ... ಚೆನ್ನಗ್ ಬರಿತೀಯ......" ನನ್ನ team ಮಿತ್ರರಿಗೆ ಬರೆದಿದ್ದ testimonial ನೋಡಿ ಸಂಜು message ಮಾಡಿದ್ದ.... ಅದೇ ಗುಂಗಿನಲ್ಲಿ javascriptನಲ್ಲಿ ಮಾಡಬೇಕಿದ್ದ changes ಮಾಡುತ್ತಾ ಕುಳಿತಿದ್ದೆ. ಎಂದಿನಂತೆ ಒಬ್ಬರೊನ್ನೊಬ್ಬರು ಕಿಚಾಯಿಸುತ್ತಿದ್ದ team ಅಂದು hyperactive ಆಗಿ ಕೆಲಸ ಮಾಡುತ್ತಾ ಕುಳಿತಿತ್ತು.

ಹೇಗೋ... ಹೀಗೇ ನನ್ನ ಜೊತೆ social networkingನ ಬಗ್ಗೆ ಮಾತು ಆಡುತ್ತಿದ್ದ "ವಸು", Eureka ಎಂದು bathtubನಿಂದ ಎದ್ದು ಕೂತ Archimedesನಂತೆ, ತನ್ನ low height chair ನಿಂದ ಛಂಗ್...ನೆ ಹಾರಿ ನಿಂತು, "ನಾವೇಕೆ ನಮ್ಮ ಬ್ಲಾಗ್ ಮಾಡಬಾರ್ದು????" ಎಂದದ್ದೇ ತಡ... ಕುಡಿಯಲು ಬಿಟ್ಟವನಿಗೆ ಬಾಟ್ಲಿ ತೋರಿಸಿದಂತಾಗಿ ನಾನು, "ಹೇ........ ಮಸ್ತ್ idea,ನಮ್ಮ ಟೀಮಿನ ಬ್ಲಾಗ್ ಮಾಡೋಣ್ವಾ??????" ಎಂದೆ....ಡೋಲಿಗೊಂದು ತಾಳವಿದ್ದಂತೆ, ಮಹಂತು... ತನ್ನ ಬೆಳಗಾವಿ ಶೈಲಿಯಲ್ಲಿ.."ಮಾಡೋಣುಉಉಉ" ಎಂದದ್ದೇ .... ಅದ್ಲೆಲ್ಲಿ ಅಡಗಿತ್ತೋ ಆ ಸ್ಫೂರ್ತಿ......, ಎಲ್ಲಾರೊ ಜೈ ಎನ್ನುವುದನ್ನೇ ಕಾಯುತ್ತಿದ್ದಂತೆ ಕಂಡ "ವಸು", ತಮ್ಮ computerನಲ್ಲಿ blogspot ತೆರೆದು ನಮ್ಮ account ಮಾಡಲು ಮುಂದಾಗಿಯೇಬಿಟ್ಟರು..... ಏನೋ ಅವರನ್ನು ತಡೆದು ನಿಲ್ಲಿಸಿದವರಂತಾಗಿ......"ಅದು ಸರಿ.., ಹೆಸರೇನು ಇಡೋಣ????"... ಎಲ್ಲರ ಕಡೆಯೂ ಒಂದು ಬಾರಿ ನೋಡಿ, ಎಲ್ಲರ ಮುಖಾರವಿಂದಗಳಲ್ಲಿ Question mark ಕಂಡು, ಅವರೇ ಎಂದೋ decide ಮಾಡಿ ಇಟ್ಟಿದ್ದ ಹೆಸರನ್ನು ನೆನಪಿಸಿಕೊಂಡು..."ಗೆಳೆಯರ ಬಳಗ......ಗೆಳೆಯರ ಬಳಗ" ಎರಡು ಸಾರಿ ಕೂಗಿ ಹೇಳಿದರು.... ಮಹಂತು, ತನ್ನ ಚಿಕ್ಕ ಕಣ್ಣುಗಳನ್ನು ಇನ್ನಷ್ಟು ಚಿಕ್ಕವು ಮಾಡಿ, ಹರಳೆ ಎಣ್ಣೆ ಕುಡಿದವನಂತೆ ಒಂದು look ಕೊಟ್ಟ... ಎಲ್ಲೋ ಅಸಮಂಜಸದಲ್ಲಿದ್ದ ನನಗೂ ಒಂದು ಸಾಥ್ ಸಿಕ್ಕಂತಾಗಿ "ವಸು..... ಏನೋ ಅಷ್ಟು impact ಕೊಡ್ತಾಯಿಲ್ಲ....ಇನ್ನೊಂದು ಹೇಳ್ರಲಾ......" ಎಂದೆ....ಒಮ್ಮೆ ಆ ಪಕ್ಕ, ಈ ಪಕ್ಕ, ಮೇಲೆ, ಮುಂದೆ ನೋಡಿದ ವಸು..... ನಮ್ಮೆಲ್ಲರ ಹೆಸರುಗಳನ್ನು ಕೂಡಿಸುತ್ತಾ ಯಾವುದಾದರು ಹೆಸರು ಬರುತ್ತದೆಯಾ?? ಗಮನಿಸಲು ಮುಂದಾದರು..... ಒಮ್ಮೆಲೇ ಬೋಧಿ ವೃಕ್ಷದ ಕೆಳಗೆ ಬುದ್ಧನಿಗೆ ಜ್ಞ್ಯಾನೋದಯವಾದಂತೆ...., ಮುಂದಿನ desk ನ ಮೇಲಿಂದ ಒಂದು paper ಬದಿಗೆ ಸೆಳೆದು, "ಹೇ.... ನಮ್ಮ ಹೆಸರುಗಳ ಮೊದಲನೆ ಅಕ್ಷರಗಳನ್ನು ಸೇರಿಸಿದರೆ ಏನಾದರೂ ಬರಬಹುದಾ?????" ಎಂದು ಯೋಚಿಸಿ.....ತಾನೇ ಅದರಲ್ಲಿ ಎಲ್ಲರ ಹೆಸರುಗಳನ್ನು ಗೀಚಿಕೊಳ್ಳಲು ಶುರುವಾದರು......

"ಆನಂದ್.......... ಆ"......
"ಮಹಂತೇಶ್......... ಮ".....

ಅಲ್ಲಿಯ ವರೆಗೂ..... ತನಗೆ ಇದ್ಯಾವುದರ ಸಂಬಂಧವೂ ಇಲ್ಲದಂತೆ, ತಲೆಯನ್ನು ಆಗೊಮ್ಮೆ ಈಗೊಮ್ಮೆ ಅಲ್ಲಾಡಿಸುತ್ತಾ..... ಕಪ್ಪನೆಯ ಗುಂಡನ್ನು ಎಲ್ಲಾ "ಕೋನ???!!!!"ಗಳಿಂದಲೂ ನೋಡುತ್ತಾ, ಯಾವುದೋ logo design ಮಾಡುತ್ತಿದ್ದ "ಹ್ಯಾಪಿ" ಹಿಂದೊಮ್ಮೆ ತಿರುಗಿ.... ಘಂಟೆ ಹೊಡೆದಂತೆ..... "ಅಮಾವಾಸ್ಯೆ"... ಎಂದೊಮ್ಮೆ ತನ್ನ ಆಸ್ತಮ ಅಜ್ಜಿಯ "ಖ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್" ನಗು ನಕ್ಕಿದ್ದೆ,.... ಅಮಾವಾಸ್ಯೆಯಲ್ಲಿ ಚಂದ್ರ ಕಂಡವನಂತೆ ನಾನೂ ನನ್ನ ಹುಚ್ಚು ಶೈಲಿಯಲ್ಲಿ..... super ಹೆಸರು ರೀ mast ಇದೆ...... ಎಂದು ಅವರ ನಗುವಿನೊಡನೆ ನನ್ನ ನಗುವನ್ನೂ ಬೆರೆಸಿದೆ...... "ವಸು" ಈ ಹುಚ್ಚರು ಏಕೆ ಹೀಗೆ ನೆಗುತ್ತಿದ್ದಾರೆ?? ಎನ್ನುವಂತೆ ಒಂದು expression ಕೊಟ್ಟು... ಮತ್ತೆ ತಾನು ಗೀಚುತ್ತಿದ್ದ paper ಅನ್ನು ಎರಡು ಸಾರಿ ಹಾಗೆ ಹೀಗೆ ನೋಡಿ.......,"ಹೇಏಏಏಏಏ...... ಈ letters ಕೂಡಿಸಿದ್ರು....ಹಾಗೆ ಬರುತ್ತೆ.... "ಅಮವಾಸ್ಯೆ"....."
ಎಂದರು....

ಹ್ಯಾಪಿ ಇನ್ನೆರಡು ಭಾರಿ " ಖ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್" "ಖ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್".... ಮಹಂತು........"Oh......Sh*t"...

ಹಾಗೇ ಎಲ್ಲರ ನಗುವಿನೊಂದಿಗೆ ಹುಟ್ಟಿಕೊಂಡಿತ್ತು... ನಮ್ಮ blog, "ಅಮವಾಸ್ಯೆ"..


Blogಏನೋ ಶುರುವಾಯ್ತು..... ಆದರೆ ಬರೆಯುವುದು ಏನನ್ನು???? ಅಂತಹ ಸಾಧನೆ ಏನು ಮಾಡಿದೀವಿ ನಾವು???ಅದು ವರೆಗೂ ಯೋಚಿಸದಿದ್ದ ಪ್ರಶ್ನೆ ತನೇ ತಾನಾಗಿ ಎಲ್ಲರ ಮನಸ್ಸಲ್ಲಿ ಮನೆಮಾಡಿತ್ತು....,ನನ್ನನ್ನು ಹೊರತುಪಡಿಸಿ!!!..


"ವಿಶೇಷವಿರುವುದು ಸಾಧನೆಯಲ್ಲಲ್ಲ ಅದರ ಹಾದಿಯಲ್ಲಿ".....

"ಕಥೆ ಬರೆಯಲು ಕನಸು ಕಾಣಬೇಕು, ನಿಜ ಹೇಳಲು ಮನಸು ಮಾಡಬೇಕು".... ಎಂದೋ, ಎಲ್ಲೋ ಕೇಳಿದ್ದ ಪದಗಳು ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು....Company join ಆದ ಕೆಲವೇ ದಿನಗಳಲ್ಲಿ ಗಾಜಿನಂತಿರುವ ಇವರ ಮನಸ್ಸನ್ನು ಅರಿತಿದ್ದ ನನಗೆ ಇವರ ಬಗ್ಗೆ ತಿಳಿಸಲು ಪದಗಳನ್ನು ಹುಡುಕುವ ಅವಷ್ಯಕತೆ ಇರಲಿಲ್ಲ....

ತನ್ನ ಹಸಿವಯ್ಸಿನಲ್ಲಿ ಎತ್ತರ, ತಗ್ಗುಗಳನ್ನು ಸಮನಾಗಿ ಕಂಡು, ತಾನೇ ತನ್ನ ಹಾದಿಯನ್ನು ನಿರ್ಮಿಸಿಕೊಂಡು, ಯಾವುದಕ್ಕೂ ತಲೆಬಾಗದ ಮರದಂತೆ ನಿಂತಿರುವ "ಹ್ಯಾಪಿ".....

ಜವಾಬ್ದಾರಿಯನ್ನು ಹೆಗಲಿಗೇರಿಸಿ, ತನ್ನ ಕರ್ತವ್ಯಗಳನ್ನು ಚಾಚೂ ತಪ್ಪದೆ ನೆರವೇರಿಸಿ, ಕಷ್ಟಗಳನ್ನು "ಎದುರಿಸಿ".... ಅಲ್ಲ.... "ಹೆದರಿಸಿ", ಗಾಳಿಗೆ ಎದೆಯೊಡ್ಡಿ ನಿಂತ ಬೆಟ್ಟದಂತಿರುವ "ವಸು"....

ಕಿರಿ ವಯಸ್ಸಿನಲ್ಲಿ ದುಡಿಯಲು ಮನಸ್ಸು ಮಾಡಿ, ಪ್ರತಿಯೊಬ್ಬರೊಡನೆ ತಾನೊಬ್ಬನಾಗಿ, ಸ್ನೇಹಕ್ಕೆ ತಾನೊಂದು ಹೆಸರಾಗಿ, ಕಷ್ಟದಲ್ಲಿರುವವರನ್ನು ಕಂಡು ತನ್ನ ಕಣ್ಣುಗಳನ್ನು ಹಸಿ ಮಾಡಿಕೊಳ್ಳುವ "ಮಹಂತು"......

ಪುಟಗಳೇನು?......... ಪುಸ್ತಕಗಳನ್ನು ಬರೆಯಬಹುದು.....

ಇದೇ ನಮ್ಮ Team...... Highs or Lows.... Always Together

ಮೊದಲನೆಯ ದಿನ ಬ್ಲಾಗ್ ಓದಿದ ವಸು "ಬ್ಲಾಗ್ ಸ್ವಲ್ಪ Serious ಆಗಿರಲಿ" ಎಂದು ತಮ್ಮ Military style ಅಲ್ಲಿ ಹೇಳಿದ್ದರು, "ಅರೆ.... ಹಾಗಿರಬೇಕೆಂದರೆ Blog ಏನಕ್ಕೆ ಬರೆಯೋದು?? Website ಮಾಡೋಣ" ಎಂದು ಕಿಚಾಯಿಸಿ ಬಂದಿದ್ದೆ.... ಆದರೆ ಈ Post ತಾನೆ ತಾನಾಗಿ serious ಆಗುತ್ತದೆಂದು ತಿಳಿದಿರಲಿಲ್ಲ....!!!!...

"Zindagi aur kuch bhi nahi.....Teri meri kahani hain" ಎಂದು ಹೇಳುತ್ತಾ ಇನ್ನು ನಮ್ಮ officeನ ಒಂದೊಂದೇ ಮಗ್ಗಲುಗಳನ್ನು ನಿಮ್ಮ ಮುಂದೆ ಪರಿಚಯಿಸುತ್ತೇವೆ...its for fun...ಓದಿ ನಕ್ಕುಬಿಡಿ...ನಿಮ್ಮ ನಗು ನಮಗೆ ಅಮೂಲ್ಯ. :-D

Friday, July 9, 2010

ಅಮಾವಾಸ್ಯೆ ಅಂದ್ರೆ............

ಚಂದ್ರ ಕಾಣಲ್ಲ ಅಷ್ಟೇ...
ಸುಮ್ಮನೇ ವಾರ, ತಿಥಿ, ನಕ್ಷತ್ರ ನೋಡಿ ತಲೆ ಹಾಳು ಮಾಡ್ಕೋತೀರಿ. ನಿಮ್ಮ ಕೆಲಸ ನೀವು ಮಾಡಿ. ಸರಿಯಾಗಿ ಕೆಲಸ ಮಾಡಿದ್ರೆ ರಿಸಲ್ಟ್ ಬಂದೇ ಬರುತ್ತೆ.